ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮಾಡು ಇಲ್ಲವೇ ಮಡಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಟೇಬಲ್ ಟಾಪರ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಎದುರಿಸುತ್ತಿದೆ. ಡೇರ್ ಡೇವಿಲ್ಸ್ ಸುಸ್ಥಿರ ಗೆಲುವಿನ ಗತಿಯನ್ನು ಲೀಗ್‌ವುದ್ದಕ್ಕೂ ನಿರ್ಮಿಸಲು ವಿಫಲವಾಗಿದ್ದು, ಶುಕ್ರವಾರದ ಪಂದ್ಯದಲ್ಲಿ ಸೋಲುಗಳನ್ನು ಒಂದರ ಹಿಂದೊಂದು ಕಟ್ಟಿಕೊಂಡು ಆಡುತ್ತಿದೆ.
12 ಪಂದ್ಯಗಳಲ್ಲಿ 12 ಪಾಯಿಂಟ್‌ಗಳೊಂದಿಗೆ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಶುಕ್ರವಾರ ಸೋತರೆ, ಪ್ಲೇಆಫ್ ಬರ್ತ್ ಸ್ಪರ್ಧೆಯಿಂದ ಅದು ಹೊರಬೀಳುತ್ತದೆ.
ಸನ್‌ರೈಸರ್ಸ್ ಅಕ್ಷರಶಃ ಪ್ಲೇಆಫ್ ಹಂತ ಪ್ರವೇಶಿಸಿದ್ದು, 12 ಪಂದ್ಯಗಳಲ್ಲಿ 16 ಪಾಯಿಂಟ್‌ಗಳಿಂದ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದಾರೆ. ಡೇರ್ ಡೆವಿಲ್ಸ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 19 ರನ್‌ಗಳಿಂದ ಸೋತಾಗ ಅದರ ಪ್ಲೇ ಆಫ್ ಬರ್ತ್ ಆಸೆಗೆ ಪೆಟ್ಟು ಬಿದ್ದಿತ್ತು.
ಸ್ಥಳೀಯ ಆಟಗಾರರಾದ ಮಾಯಾಂಕ್ ಅಗರವಾಲ್, ಶ್ರೇಯಾಸ್ ಅಯ್ಯರ್ , ಕರುಣ್ ನಾಯರ್, ಸಂಜು ಸ್ಯಾಮ್ಸ್ ಮುಂತಾದವರು ಅಸ್ಥಿರತೆಯ ಪ್ರದರ್ಶನ ನೀಡಿದ್ದರಿಂದ ಡೇರ್‌ಡೆವಿಲ್ಸ್‌ಗೆ ಕೆಟ್ಟ ಪೆಟ್ಟು ನೀಡಿದೆ. ಹಿರಿಯ ಬ್ಯಾಟ್ಸ್‌ಮನ್ ಡುಮಿನಿ ಟೀಂಗೆ ಅಷ್ಟೊಂದು ಕೊಡುಗೆ ನೀಡಿಲ್ಲ. ಅವರ ಫಾರಂ ಕಳೆದುಕೊಂಡ ಆಟದಿಂದ ಡೇರ್ ಡೆವಿಲ್ಸ್ ಲಯಕ್ಕೆ ಪೆಟ್ಟುಬಿದ್ದಿದೆ.
ಸನ್‌ರೈಸರ್ಸ್ ಪಂದ್ಯಾವಳಿಯಲ್ಲಿ ಅತ್ಯಂತ ಸುಸ್ಥಿರ ತಂಡವಾಗಿದ್ದು, ಆರಂಭದ ಎರಡು ಪಂದ್ಯಗಳಲ್ಲಿ ಸೋತಿದ್ದನ್ನು ಬಿಟ್ಟರೆ ಲೀಗ್‌ನಲ್ಲಿ ಒಂದರ ಹಿಂದೊಂದು ಪಂದ್ಯಗಳನ್ನು ಸೋತಿಲ್ಲ.