Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್ ಎಷ್ಟೊಂದು ಸುಲಭ ಎಂದು ತೋರಿಸೋದನ್ನು ನಿಲ್ಲಿಸಿ: ಕೊಹ್ಲಿಗೆ ಫಿಂಚ್ ಟ್ವೀಟ್

ಬ್ಯಾಟಿಂಗ್ ಎಷ್ಟೊಂದು ಸುಲಭ ಎಂದು ತೋರಿಸೋದನ್ನು ನಿಲ್ಲಿಸಿ: ಕೊಹ್ಲಿಗೆ ಫಿಂಚ್ ಟ್ವೀಟ್
ನವದೆಹಲಿ: , ಶುಕ್ರವಾರ, 20 ಮೇ 2016 (16:58 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಬ್ಯಾಟಿಂಗ್ ಕೌಶಲ್ಯವನ್ನು ಹೊಸ ಮಟ್ಟಕ್ಕೆ ಏರಿಸಿದ್ದಾರೆ. ನಾಲ್ಕು ಶತಕಗಳನ್ನು ಸಿಡಿಸಿದ್ದಲ್ಲದೇ ಸ್ಟೈಲಿಷ್ ಬಲಗೈ ಆಟಗಾರ ಅತ್ಯುತ್ತಮ ದಾಳಿಗಳ ವಿರುದ್ಧ ಕೂಡ ಯಾವುದೇ ಸಮಸ್ಯೆ ಇಲ್ಲದೇ ಬೌಂಡರಿಗಳನ್ನು ಸಿಡಿಸಿದ್ದಾರೆ.
 
ಕೊಹ್ಲಿ ಬ್ಯಾಟಿನಿಂದ ರನ್ ಸಿಡಿಯದಂತೆ ನಿಯಂತ್ರಿಸುವುದು ಹೇಗೆಂದು ಬೌಲರುಗಳಿಗೆ ಸುಳಿವು ಸಿಗುತ್ತಿಲ್ಲ. ಕೊಹ್ಲಿಯನ್ನು ಔಟ್ ಮಾಡುವ ಉಪಾಯಗಳು ಯಾವುದೂ  ಹೊಳೆಯುತ್ತಿಲ್ಲ. ಇತ್ತೀಚಿನ ಶತಕದ ಬಳಿಕ ಕೊಹ್ಲಿಯ ಬೆಳೆಯುತ್ತಿರುವ ಪರಿ ನೋಡಿ ಬ್ಯಾಟ್ಸ್‌ಮನ್‌ಗಳು ಕೂಡ ಅಚ್ಚರಿಗೊಂಡಿದ್ದಾರೆ. ಸಾಮಾಜಿಕ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಗುಜರಾತ್ ಲಯನ್ಸ್ ಬ್ಯಾಟ್ಸ್‌ಮನ್ ಆರಾನ್ ಫಿಂಚ್ ವಿರಾಟ್ ಕೊಹ್ಲಿಗೆ ''ಬ್ಯಾಟಿಂಗ್ ಎಷ್ಟೊಂದು ಸುಲಭ ಎಂದು ತೋರಿಸುವುದನ್ನು ನಿಲ್ಲಿಸಿ. ಇದರಿಂದ ಜಗತ್ತಿನ ಅನೇಕ ಬ್ಯಾಟ್ಸ್‌ಮನ್‌ಗಳು ಮುಜುಗರಪಡುವಂತಾಗಿದೆ'' ಎಂದು ಬರೆದಿದ್ದಾರೆ.  

ಕೊಹ್ಲಿಗೆ ಬೌಲ್ ಮಾಡಿದ ಬೌಲರುಗಳು ಈಗಾಗಲೇ ತಮ್ಮ ಅಸಹಾಯಕತೆ ತೋಡಿಕೊಂಡು ಹೇಗೆ ಬೌಲಿಂಗ್ ಮಾಡಬೇಕೆನ್ನುವುದೇ ತೋಚುತ್ತಿಲ್ಲ ಎಂದಿದ್ದರು.  ದೆಹಲಿ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ 865 ರನ್ ಸ್ಕೋರ್ ಮಾಡಿದ್ದು, ತನ್ನ ಸಹಆಟಗಾರ ಡಿವಿಲಿಯರ್ಸ್ ಅವರಿಗಿಂತ 268 ರನ್ ಮುಂದಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ರನ್ ಓಡುವಾಗ ಕೋಪತಾಪ ಪ್ರದರ್ಶಿಸಿದ ಕ್ಯಾಪ್ಟನ್ ಕೂಲ್ ಧೋನಿ