Select Your Language

Notifications

webdunia
webdunia
webdunia
webdunia

ಆರ್ ಸಿಬಿ, ಲಕ್ನೋ ಪಂದ್ಯಕ್ಕೆ ಮಳೆ ಅಡಚಣೆ: ಎಷ್ಟು ಗಂಟೆಗೆ ಪಂದ್ಯ ಪುನರಾರಂಭ

RCB vs LSG
Photo Credit: X
ಲಕ್ನೋ: ಐಪಿಎಲ್ 2026 ರಲ್ಲಿ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಆದರೆ ಇದೀಗ ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭಗೊಳ್ಳಲಿದೆ.

ಇಂದು ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಲಕ್ನೋ ಇಂದು ಅದ್ಭುತ ಬ್ಯಾಟಿಂಗ್ ನಡೆಸಿದೆ. ಮಿಚೆಲ್ ಮಾರ್ಷ್ ಅಬ್ಬರದ ಶತಕ ಸಿಡಿಸಿದ್ದಾರೆ. ಒಟ್ಟು 51 ಎಸೆತ ಎದುರಿಸಿದ ಅವರು 107 ರನ್ ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೊಂದೆಡೆ 9 ಎಸೆತಗಳಿಂದ 14 ರನ್ ಗಳಿಸಿರುವ ನಿಕಲಸ್ ಪೂರನ್ ಕ್ರೀಸ್ ನಲ್ಲಿದ್ದಾರೆ.

ಲಕ್ನೋ ಇತ್ತೀಚೆಗಿನ ವರದಿ ಬಂದಾಗ 14 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತ್ತು. ಅಷ್ಟರಲ್ಲಿ ಮಳೆ ಬಂದಿತ್ತು. ಹೀಗಾಗಿ ಆಟ ಸ್ಥಗಿತಗೊಂಡಿತ್ತು. ಒಮ್ಮೆ ಮಳೆ ಬಿಡುವ ಸೂಚನೆಯಿತ್ತಾದರೂ ಮತ್ತೆ ಬಿರುಸಾದ ಕಾರಣಕ್ಕೆ ಆಟ ಸ್ಥಗಿತಗೊಳಿಸಲಾಯಿತು.

ಇದೀಗ 10 ಗಂಟೆಗೆ ಪಂದ್ಯ ಪುನರಾರಂಭಗೊಳ್ಳಲಿದೆ. ಸದ್ಯದ ವರದಿ ಪ್ರಕಾರ ಯಾವುದೇ ಓವರ್ ಕಡಿತಗೊಳಿಸಲಾಗುವುದಿಲ್ಲ ಎಂಬ ವರದಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2026: ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬೌಲಿಂಗ್ ಆಯ್ಕೆ