Select Your Language

Notifications

webdunia
webdunia
webdunia
webdunia

ಐಪಿಎಲ್ 2026 ಫೈನಲ್ ಬೆಂಗಳೂರಿನಲ್ಲಿ ನಡೆಯಲ್ಲ: ಎಲ್ಲದಕ್ಕೂ ಶಾಸಕರು, ಸಚಿವರೇ ಕಾರಣನಾ

Chinnaswamy ground
ಬೆಂಗಳೂರು: ಐಪಿಎಲ್ 2026 ರ ಫೈನಲ್ ಪಂದ್ಯ ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲ್ಲ ಎನ್ನಲಾಗುತ್ತಿದೆ. ಇದಕ್ಕೆ ಕರ್ನಾಟಕದ ಶಾಸಕರು, ಸಚಿವರೇ ಮೂಲ ಕಾರಣ ಎಂಬ ಸುದ್ದಿಹಬ್ಬಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ಈ ಬಾರಿ ಉದ್ಘಾಟನಾ ಪಂದ್ಯ ನಡೆದಿತ್ತು. ಸಾಮಾನ್ಯವಾಗಿ ಹಾಲಿ ಚಾಂಪಿಯನ್ ತವರು ಮೈದಾನದಲ್ಲೇ ಫೈನಲ್ ಪಂದ್ಯವೂ ನಡೆಯುತ್ತದೆ. ಅದರಂತೆ ಈ ಬಾರಿ ಚಿನ್ನಸ್ವಾಮಿಯಲ್ಲಿ ಫೈನಲ್ ನೋಡಬಹುದು ಎಂದು ಅಭಿಮಾನಿಗಳು ಕಾದಿದ್ದರು.

ಆದರೆ ಅವರಿಗೆ ನಿರಾಸೆಯಾಗುವ ಸಾಧ್ಯತೆಯಿದೆ. ಈ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ವಿಐಪಿ ಟಿಕೆಟ್ ಗೆ ಬೇಡಿಕೆಯಿಡುತ್ತಿರುವ ಶಾಸಕರು, ಸಚಿವರೇ ಕಾರಣ ಎನ್ನಲಾಗಿದೆ.

ಈಗಾಗಲೇ ಸಚಿವರು ಶಾಸಕರಿಗೆ ತಲಾ 2 ಉಚಿತ ಟಿಕೆಟ್ ನೀಡಲಾಗುತ್ತಿದೆ. ಆದರೆ 4-5 ಟಿಕೆಟ್ ನೀಡುವಂತೆ ಒತ್ತಡ ಕೇಳಿಬರುತ್ತಿದೆ. ಫೈನಲ್ ಪಂದ್ಯದ ಟಿಕೆಟ್ ಗೆ ಮತ್ತಷ್ಟು ಬೇಡಿಕೆಯಿರಲಿದೆ. ಇದರಿಂದ ಬೇಸತ್ತು ಬಿಸಿಸಿಐ ಫೈನಲ್ ಪಂದ್ಯವನ್ನೇ ಬೇರೆಡೆಗೆ ಸ್ಥಳಾಂತರಿಸುವ ಯೋಚನೆ ಮಾಡುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆಸರಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ: ಅಕ್ಷರ್ ಪಟೇಲ್ ಗೆ ಇದೂ ಗೊತ್ತಿಲ್ವಾ