Webdunia - Bharat's app for daily news and videos

Install App

IPL 2025 RCB vs PBKS: ಅನುಷ್ಕಾ ಶರ್ಮಾ ಹೇಳಿದ್ದು ಸರಿ ಬೌಲರ್ ಗಿಂತ ಕೊಹ್ಲಿಗೇ ಜೋಶ್ ಜಾಸ್ತಿ, ವಿಡಿಯೋ

Krishnaveni K
ಗುರುವಾರ, 29 ಮೇ 2025 (20:20 IST)
Photo Credit: X
ಚಂಡೀಘಡ: ಐಪಿಎಲ್ 2025 ರ ಪ್ಲೇ ಆಫ್ ನಲ್ಲಿ ಕಿಂಗ್ಸ್ ಪಂಜಾಬ್ ವಿರುದ್ಧ ಆರ್ ಸಿಬಿ ಕಿಂಗ್ ವಿರಾಟ್ ಕೊಹ್ಲಿ ಜೋಶ್ ನೋಡಿದರೆ ಅನುಷ್ಕಾ ಶರ್ಮಾ ಹೇಳಿದ ಮಾತು ನೆನಪಾಗುತ್ತದೆ.

ಇಂದು ಪ್ಲೇ ಆಫ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದಕ್ಕೆ ತಕ್ಕಂತೆ ಆರ್ ಸಿಬಿ ತ್ರಿವಳಿ ವೇಗಿಗಳಾದ ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ ವುಡ್ ಮತ್ತು ಯಶ್ ದಯಾಳ್ ಬೌಲಿಂಗ್ ನಡೆಸುತ್ತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಪಂಜಾಬ್ 8 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿ ಸಂಕಷ್ಟದಲ್ಲಿದೆ.

ಪ್ರತೀ ವಿಕೆಟ್ ಬಿದ್ದಾಗಲೂ ಬೌಲರ್ ಗಿಂತ ಹೆಚ್ಚು ಜೋಶ್ ನಲ್ಲಿ ವಿರಾಟ್ ಕೊಹ್ಲಿಯೇ ಸಂಭ್ರಮಿಸುತ್ತಿದ್ದಾರೆ. ಈ ಹಿಂದೊಮ್ಮೆ ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಕೊಹ್ಲಿ ವಿಕೆಟ್ ಬಿದ್ದಾಗ ಹೇಗೆ ಸಂಭ್ರಮಿಸುತ್ತಾರೆ ಎಂದು ಆಕ್ಟ್ ಮಾಡಿ ತೋರಿಸಿದ್ದರು. ಜೊತೆಗೆ ವಿಕೆಟ್ ಬಿದ್ದಾಗ ಬೌಲರ್ ಸಂಭ್ರಮಿಸುತ್ತಾರೋ ಬಿಡುತ್ತಾರೋ ವಿರಾಟ್ ಮಾತ್ರ ಅವರಿಗಿಂತ ಹೆಚ್ಚು ಜೋಶ್ ನಲ್ಲಿ ಸಂಭ್ರಮಿಸುತ್ತಾರೆ ಎಂದಿದ್ದರು.

ಅವರ ಮಾತು ಇಂದಿನ ಪಂದ್ಯ ನೋಡಿದರೆ ಅಕ್ಷರಶಃ ನಿಜವೆನಿಸುತ್ತಿದೆ. ಪ್ರತೀ ವಿಕೆಟ್ ಬಿದ್ದಾಗಲೂ ಕೊಹ್ಲಿ ಆಳೆತ್ತರಕ್ಕೆ ಹಾರಿ ಅಗ್ರೆಸಿವ್ ಆಗಿ ಸಂಭ್ರಮಿಸುತ್ತಿದ್ದಾರೆ. ಅವರ ಈ ಆಕ್ರಮಣಕಾರೀ ವರ್ತನೆಯೇ ಪ್ರೇಕ್ಷಕರಲ್ಲೂ ಹೊಸ ಜೋಶ್ ತುಂಬುತ್ತದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್

ಇದನ್ನು ನಂಬಲು ಅಸಾಧ್ಯ, ಸಿರಾಜ್ ಪ್ರದರ್ಶನಕ್ಕೆ ಬೇಷ್ ಎಂದ ಕ್ರಿಕೆಟ್ ದೇವರು ಸಚಿನ್

ENG vs IND Test: ಭಾರತದ ಬೌಲರ್‌ಗಳ ವಿರುದ್ಧ ಗಂಭೀರ ಆರೋಪ ಎಸಗಿದ ಪಾಕ್‌ ವೇಗಿ

ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಗಿದ್ದರೂ ಕೆಎಲ್ ರಾಹುಲ್ ಗೆ ಹೀಗ್ಯಾಕೆ

ಮುಂದಿನ ಸುದ್ದಿ
Show comments