Webdunia - Bharat's app for daily news and videos

Install App

Rahul Dravid: ರಾಹುಲ್ ದ್ರಾವಿಡ್ ಮೇಲೆ ಸಂಜು ಸ್ಯಾಮ್ಸನ್ ಮುನಿಸು: ವಿಡಿಯೋ ವೈರಲ್

Krishnaveni K
ಶುಕ್ರವಾರ, 18 ಏಪ್ರಿಲ್ 2025 (10:00 IST)
Photo Credit: X
ಮುಂಬೈ: ಐಪಿಎಲ್ 2025 ರಲ್ಲಿ ಸತತ ಸೋಲುಗಳ ಬಳಿಕ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮತ್ತು ಕೋಚ್ ರಾಹುಲ್ ದ್ರಾವಿಡ್ ನಡುವೆ ಎಲ್ಲವೂ ಸರಿಯಿಲ್ವಾ ಎಂಬ ಅನುಮಾನ ಮೂಡಿದೆ. ಇದಕ್ಕೆ ತಕ್ಕಂತೆ ವಿಡಿಯೋವೊಂದು ವೈರಲ್ ಆಗಿದೆ.

ಮೊನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ಸೂಪರ್ ಓವರ್ ನಲ್ಲಿ ಸೋಲುಂಡಿತು. ಈ ಸೋಲಿನ ಬಳಿಕ ನಾಯಕ ಸಂಜು ಸ್ಯಾಮ್ಸನ್ ತೀವ್ರ ಅಸಮಾಧಾನಗೊಂಡಿದ್ದು ಕಂಡುಬಂತು.

ಎಲ್ಲಾ ಆಟಗಾರರನ್ನು ರಾಹುಲ್ ದ್ರಾವಿಡ್ ಒಟ್ಟು ಸೇರಿಸಿ ಮೀಟಿಂಗ್ ಮಾಡುತ್ತಿದ್ದರೆ ಇತ್ತ ಸಂಜು ಸ್ಯಾಮ್ಸನ್ ಮಾತ್ರ ಪ್ರತ್ಯೇಕವಾಗಿ ನಿಂತಿದ್ದರು. ಪಕ್ಕದಲ್ಲಿ ಒಬ್ಬ ಆಟಗಾರ ಸೇರಿಕೊಳ್ಳುವಂತೆ ಹೇಳಿದರೂ ಬೇಡ ಎನ್ನುವಂತೆ ಕೈ ಸನ್ನೆ ಮಾಡಿದ ಸಂಜು ದೂರ ಉಳಿದರು. ಇದು ದ್ರಾವಿಡ್ ಮತ್ತು ಸಂಜು ನಡುವೆ ಎಲ್ಲವೂ ಸರಿಯಲ್ವಾ ಎಂಬ ಅನುಮಾನ ಹುಟ್ಟುಹಾಕಿದೆ.

ಈ ಸೀಸನ್ ನಲ್ಲಿ ಎಲ್ಲಾ ನಿರ್ಧಾರಗಳನ್ನು ರಾಹುಲ್ ದ್ರಾವಿಡ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಸಂಜು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಸೂಪರ್ ಓವರ್ ನಲ್ಲಿ ಯಾರನ್ನು ಆಡಿಸಬೇಕು ಎಂಬ ತೀರ್ಮಾನ ದ್ರಾವಿಡ್ ರದ್ದೇ ಆಗಿತ್ತು ಎಂಬ ಊಹಾಪೋಹವಿದೆ. ಇದೆಲ್ಲಾ ಕಾರಣಕ್ಕೆ ಸಂಜು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್‌ ಗಿಲ್‌ ಡಬಲ್‌ ಸೆಂಚುರಿ ಬೆನ್ನಲ್ಲೇ ಆಂಗ್ಲರ ಗಾಯಕ್ಕೆ ಉಪ್ಪು ಸವರಿದ ಆಕಾಶ್‌ ದೀಪ್‌: ಭಾರತಕ್ಕೆ ಬೃಹತ್‌ ಮುನ್ನಡೆ

IND vs ENG: ತಪ್ಪು ತಿದ್ದಿಕೊಂಡು ಮೊದಲ ಇನಿಂಗ್ಸ್ ನಲ್ಲಿ ದೊಡ್ಡ ಮೊತ್ತ ಪೇರಿಸಿದ ಟೀಂ ಇಂಡಿಯಾ

ಆಂಗ್ಲರ ನಾಡಲ್ಲಿ ಶುಭ್ಮನ್ ಗಿಲ್ ಡಬಲ್ ಸೆಂಚುರಿ, ಹಲವು ದಾಖಲೆಗಳು ಉಡೀಸ್‌

IND vs ENG: ವಿರಾಟ್ ದಾಖಲೆ ಮುರಿದ ಶುಭ್ಮನ್‌ ಗಿಲ್‌

IND vs ENG: ಶತಕ ಪೂರೈಸಲಾಗದೇ ನಿರಾಸೆ ಅನುಭವಿಸಿದ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments