Webdunia - Bharat's app for daily news and videos

Install App

IPL 2025: ನಮ್ಗೆ ಫೈನಲ್ ನಲ್ಲಿ ಆರ್ ಸಿಬಿ ವರ್ಸಸ್ ಮುಂಬೈ ಬೇಕೇ ಬೇಕು

Krishnaveni K
ಶನಿವಾರ, 31 ಮೇ 2025 (08:37 IST)
ಅಹಮ್ಮದಾಬಾದ್: ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದ ಬಳಿಕ ಈಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಏನೇ ಆಗಲಿ ನಮಗೆ ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ಫೈನಲ್ ಬೇಕು ಎನ್ನುತ್ತಿದ್ದಾರೆ.

ಎಲಿಮಿನೇಟರ್ ಪಂದ್ಯದಲ್ಲಿ ನಿನ್ನೆ ಗುಜರಾತ್ ಟೈಟನ್ಸ್ ತಂಡವನ್ನು 20 ರನ್ ಗಳಿಂದ ಸೋಲಿಸಿದ ಮುಂಬೈ ಈಗ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದು ಫೈನಲ್ ಕನಸು ಜೀವಂತವಾಗಿರಿಸಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೆ ಮಾತ್ರ ಮುಂಬೈಗೆ ಫೈನಲ್ ಅವಕಾಶವಿದೆ.

ಆದರೆ ಇದಕ್ಕೆ ಮೊದಲೇ ಅಭಿಮಾನಿಗಳಂತೂ ಮುಂಬೈ ಫೈನಲ್ ಗೇರುವುದು ಪಕ್ಕಾ ಎನ್ನುತ್ತಿದ್ದಾರೆ. ಆರ್ ಸಿಬಿ ಈಗಾಗೇ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ಗೆ ಅರ್ಹತೆ ಪಡೆದಿದೆ. ಎರಡನೇ ತಂಡ ಯಾವುದು ಎಂದು ನಾಳೆ ಗೊತ್ತಾಗಲಿದೆ.

ಆದರೆ ಈಗ ಆರ್ ಸಿಬಿ ಮತ್ತು ಮುಂಬೈ ಅಭಿಮಾನಿಗಳು ಈ ಎರಡು ತಂಡಗಳೇ ಫೈನಲ್ ಆಡುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಲೀಗ್ ಪಂದ್ಯದಲ್ಲಿ ಮುಂಬೈ ಸೋಲಿಸಿದ ಬಳಿಕ ಆರ್ ಸಿಬಿ ಆಟಗಾರ ಕೊಹ್ಲಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇತ್ತ ಪೆವಿಲಿಯನ್ ನಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಸಪ್ಪೆ ಮುಖ ಮಾಡಿ ಕೂತಿದ್ದರು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂಬೈ ಫೈನಲ್ ಗೆ ಬರಬೇಕು ಎಂದು ಮುಂಬೈ ಅಭಿಮಾನಿಗಳು ಬಯಸುತ್ತಿದ್ದಾರೆ. ಇತ್ತ ಆರ್ ಸಿಬಿ ಅಭಿಮಾನಿಗಳಿಗೆ ಫೈನಲ್ ನಲ್ಲಿ ರೋಹಿತ್ ವರ್ಸಸ್ ಕೊಹ್ಲಿ ಇರಬೇಕು. ಕೊನೆಗೆ ಆರ್ ಸಿಬಿ ಪ್ರಬಲ ಮುಂಬೈ ವಿರುದ್ಧ ಗೆದ್ದು ಕಪ್ ಎತ್ತಬೇಕು ಎಂಬ ಆಸೆ. ಇದರ ನಡುವೆ ಪಂಜಾಬ್ ನ್ನು ಎಲ್ಲರೂ ಮರೆತೇ ಬಿಟ್ಟಿರುವುದು ವಿಪರ್ಯಾಸ!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಾಗಲಕೋಟೆಯ ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಮಿಡಿದ ಸ್ಟಾರ್ ಕ್ರಿಕೆಟಿಗನ ಹೃದಯ, ಮಾಡಿದ್ದೇನು ಗೊತ್ತಾ

IND vs ENG: ಟೀಂ ಇಂಡಿಯಾ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರವೇನು ಗೊತ್ತಾ

ಮೊಹಮ್ಮದ್ ಸಿರಾಜ್ ಯಾರ್ಕರ್ ನಿಂದ ಇವರೆಲ್ಲರ ವೃತ್ತಿ ಜೀವನ ಬಚಾವ್ ಆಯ್ತು

ENG vs IND: ಇಂಗ್ಲೆಂಡ್ ಗೆಲುವನ್ನು ಕಸಿದ ಸಿರಾಜ್ ಬೆಂಕಿಯ ಎಸೆತ, ಆಂಗ್ಲರ ನೆಲದಲ್ಲಿ ಗೆದ್ದು ಬೀಗಿದ ಗಿಲ್ ಪಡೆ

IND vs ENG: ಆ ಒಂದು ಯಾರ್ಕರ್ ಮೊಹಮ್ಮದ್ ಸಿರಾಜ್ ಜೀವನದಲ್ಲೇ ಮರೆಯಲ್ಲ: video

ಮುಂದಿನ ಸುದ್ದಿ
Show comments