ಐಪಿಎಲ್ 2024: ಅಗ್ರಸ್ಥಾನಿ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಮುಂಬೈ ಇಂಡಿಯನ್ಸ್ ಎದುರಾಳಿ

Krishnaveni K
ಶನಿವಾರ, 11 ಮೇ 2024 (10:03 IST)
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಮೊದಲನೆಯ ತಂಡವಾಗಿ ಪ್ಲೇ ಆಫ್ ಹಂತಕ್ಕೇರುವ ಭರವಸೆಯಲ್ಲಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಕೋಲ್ಕೊತ್ತಾ ನೈಟ್ ರೈಡರ್ಸ್ ಇದುವರೆಗೆ ಆಡಿದ 11 ಪಂದ್ಯಗಳಿಂದ 8 ಗೆಲುವು ಕಂಡುಕೊಂಡಿದ್ದು 16 ಅಂಕ ಸಂಪಾದಿಸಿದೆ. ಇಂದಿನ ಪಂದ್ಯವನ್ನೂ ಗೆದ್ದರೆ ಕೆಕೆಆರ್ 18 ಅಂಕ ಸಂಪಾದಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಪಡೆ ಸತತವಾಗಿ ಗೆಲ್ಲುತ್ತಲೇ ಬಂದಿದೆ.

ಇದಕ್ಕೆ ಗೌತಮ್ ಗಂಭೀರ್ ಚಾಣಕ್ಷ್ಯ ಮೆಂಟರಿಂಗ್ ಕೂಡಾ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಟಿ20 ಸ್ಪೆಷಲಿಸ್ಟ್ ಗಳನ್ನೇ ಹೊಂದಿರುವುದು ಕೆಕೆಆರ್ ಯಶಸ್ಸಿಗೆ ಪ್ರಮುಖ ಕಾರಣ. ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಕೆಆರ್ ಈಗ ಈ ಐಪಿಎಲ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಆಡಿದ 12 ಪಂದ್ಯಗಳಿಂದ ನಾಲ್ಕೇ ಗೆಲುವು ಕಂಡಿರುವ ಮುಂಬೈಗೆ ಈಗ ಉಳಿದ ಎರಡು ಲೀಗ್ ಪಂದ್ಯಗಳು ಕೇವಲ ಔಪಚಾರಿಕವಾಗಿದೆ. ಒಂದು ಕಾಲದ ಯಶಸ್ವೀ ತಂಡವೆನಿಸಿಕೊಂಡಿದ್ದ ಮುಂಬೈ ಈ ಬಾರಿ ಹೀನಾಯ ಪ್ರದರ್ಶನದೊಂದಿಗೆ ಟೂರ್ನಿ ಕೊನೆಗೊಳಿಸುತ್ತಿರುವುದು ವಿಪರ್ಯಾಸ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

ಮುಂದಿನ ಸುದ್ದಿ
Show comments