ಐಪಿಎಲ್ 2024: ಸಿಎಸ್ ಕೆ ವಿರುದ್ಧ ಮಹತ್ವದ ಪಂದ್ಯ ಗೆದ್ದ ಗುಜರಾತ್ ಟೈಟನ್ಸ್

Krishnaveni K
ಶನಿವಾರ, 11 ಮೇ 2024 (08:52 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 35 ರನ್ ಗಳಿಂದ ಗೆದ್ದು ಟೂರ್ನಿಯಲ್ಲಿ ಜೀವಂತವಾಗಿರಿಸಿದೆ.

ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು. ಆರಂಭಿಕರಾದ ಸಾಯಿ ಸುದರ್ಶನ್ 103 ಮತ್ತು ಶುಬ್ಮನ್ ಗಿಲ್ 104 ರನ್ ಗಳಿಸಿದರು. ಇಬ್ಬರೂ ದ್ವಿಶತಕದ ಜೊತೆಯಾಟವಾಡಿದರು. ಒಟ್ಟು 51 ಎಸೆತ ಎದುರಿಸಿದ ಸಾಯಿ ಸುದರ್ಶನ್ 7 ಸಿಕ್ಸರ್ ಗಳೊಂದಿಗೆ 103 ರನ್ ಗಳಿಸಿದರು. ಶುಬ್ಮನ್ ಗಿಲ್ 55 ಎಸೆತ ಎದುರಿಸಿ 6 ಸಿಕ್ಸರ್ ಗಳೊಂದಿಗೆ 104 ರನ್ ಗಳಿಸಿ ಔಟಾದರು.

ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈಗೆ ಅಗ್ರ 3 ಕ್ರಮಾಂಕದ ಬ್ಯಾಟಿಗರು ಕೈಕೊಟ್ಟರು. ಕೇವಲ 10 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ಡೆರಿಲ್ ಮಿಚೆಲ್ 34 ಎಸೆತಗಳಿಂದ 63 ರನ್ ಗಳಿಸಿದರೆ ಮೊಯಿನ್ ಅಲಿ 56 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಉಳಿದವರಿಂದ ಸಾಥ್ ಸಿಗಲಿಲ್ಲ. ಧೋನಿ 11 ಎಸೆತಗಳಿಂದ ಅಜೇಯ 26 ರನ್ ಗಳಿಸಿದರು.

ಗುಜರಾತ್ ಪರ ಅದ್ಭುತ ದಾಳಿ ಸಂಘಟಿಸಿದ ಮೋಹಿತ್ ಶರ್ಮ 3 ವಿಕೆಟ್ ಕಬಳಿಸಿದರು. ರಶೀದ್ ಖಾನ್ 2, ಉಮೇಶ್ ಯಾದವ್, ಸಂದೀಪ್ ವಾರಿಯರ್ ತಲಾ 1 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಈ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಮುಂದಿನ ಸುದ್ದಿ
Show comments