Webdunia - Bharat's app for daily news and videos

Install App

ಐಪಿಎಲ್ 2024: ಎರಡೇ ರನ್ ಗಳಿಂದ ಹೈದರಾಬಾದ್ ವಿರುದ್ಧ ಸೋತ ಪಂಜಾಬ್ ಕಿಂಗ್ಸ್

Krishnaveni K
ಬುಧವಾರ, 10 ಏಪ್ರಿಲ್ 2024 (08:34 IST)
ಚಂಡೀಘಡ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ದುರಾದೃಷ್ಟ ಮುಂದುವರಿದಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆಯ ಓವರ್ ನಲ್ಲಿ ಕೇವಲ 2 ರನ್ ಗಳಿಂದ ಸೋತು ಹೋಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭಿಕ ಆಘಾತ ಅನುಭವಿಸಿದರೂ ಹೈದರಾಬಾದ್ ಬೃಹತ್ ಮೊತ್ತ ಪೇರಿಸಲು ಕಾರಣವಾಗಿದ್ದು ನಿತೀಶ್ ರೆಡ್ಡಿ ಬ್ಯಾಟಿಂಗ್. ಒಟ್ಟು 37 ಎಸೆತ ಎದುರಿಸಿದ ನಿತೀಶ್ 64 ರನ್ ಗಳಿಸಿದರು. ಬಳಿಕ ಅಬ್ದುಲ್ ಸಮದ್ 25 ರನ್ ಗಳ ಕೊಡುಗೆ ನೀಡಿದರು. ಪಂಜಾಬ್ ಪರ  ಅರ್ಷ್ ದೀಪ್ ಸಿಂಗ್ 4 ವಿಕೆಟ್ ಕಬಳಿಸಿ ಗಮನ ಸೆಳೆದರು.

ಈ ಮೊತ್ತ ಬೆನ್ನತ್ತಿದ ಪಂಜಾಬ್ 20 ಓವರ್ ಗಳಲ್ಲಿ 180 ರನ್ ಗಳಿಸಲಷ್ಟೇ ಶಕ್ತವಾಯಿತು. 19 ನೆಯ ಓವರ್ ವರೆಗೂ ಪಂಜಾಬ್ ಗೆಲ್ಲುವುದು ಕಷ್ಟವಾಗಿತ್ತು. ಆದರೆ 19 ನೆಯ ಓವರ್ ನಲ್ಲಿ ಶಶಾಂಕ್ ಸಿಂಗ್ ಮತ್ತು ಆಶುತೋಷ್ ಶರ್ಮ ಸತತ ಸಿಕ್ಸರ್ ಸಿಡಿಸಿ ಗೆಲುವಿನ ಕನಸು ಚಿಗುರಿಸಿದ್ದರು. ಆದರೆ ಕೊನೆಗೆ ಎರಡು ರನ್ ಗಳಿಸಲಾಗದೇ ಸೋತು ಹೋಯಿತು.

ಈ ಸೋಲು ಪಂಜಾಬ್ ಗೆ ತೀವ್ರ ನಿರಾಸೆ ತಂದಿದೆ. ಕೊನೆಯ ಓವರ್ ನಲ್ಲಿ ಎರಡೆರಡು ವೈಡ್ ಎಸೆತವಿದ್ದರೂ ಅದರ ಲಾಭ ಬಳಸಿಕೊಳ್ಳಲು ಪಂಜಾಬ್ ವಿಫಲವಾಯಿತು. ಹೈದರಾಬಾದ್ ಪರ ಭುವನೇಶ‍್ವರ್ ಕುಮಾರ್ 2, ಪ್ಯಾಟ್ ಕುಮಿನ್ಸ್, ನಟರಾಜನ್, ನಿತೀಶ್ ರೆಡ್ಡಿ, ಜಯದೇವ್ ಉನಾದ್ಕಟ್ ತಲಾ 1 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments