Webdunia - Bharat's app for daily news and videos

Install App

ಐಪಿಎಲ್ 2024: ಸನ್ ರೈಸರ್ಸ್ ಹೈದರಾಬಾದ್ ಗೆ ಇಂದು ಪಂಜಾಬ್ ಕಿಂಗ್ಸ್ ಎದುರಾಳಿ

Krishnaveni K
ಮಂಗಳವಾರ, 9 ಏಪ್ರಿಲ್ 2024 (08:41 IST)
ಮೊಹಾಲಿ: ಐಪಿಎಲ್ 2024 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪರಸ್ಪರ ಮುಖಾಮುಖಿಯಾಗಲಿದೆ. ಈ ಪಂದ್ಯ ಮೊಹಾಲಿಯಲ್ಲಿ ನಡೆಯುವುದು.

ಒಂದು ರೀತಿಯಲ್ಲಿ ನೋಡುವುದಾದರೆ ಇದು ಸಮಬಲರ ಕಾದಾಟ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಒಂದರ ನಂತರದ ಸ್ಥಾನದಲ್ಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಒಂದು ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಕಂಡಿತ್ತು.

ಈ ಬಾರಿ ಹೈದರಾಬಾದ್ ತಂಡ ಕೆಲವೊಂದು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ತಂಡದ ಬ್ಯಾಟಿಂಗ್ ಉತ್ತಮ ಫಾರ್ಮ್ ನಲ್ಲಿರುವುದು ಹೈದರಾಬಾದ್ ಗೆ ಪ್ಲಸ್ ಪಾಯಿಂಟ್. ಆಡಮ್ ಮಾರ್ಕರಮ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ.

ಆದರೆ ಇತ್ತ ಪಂಜಾಬ್ ಸತತ ಎರಡು ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಗೆಲುವು ಕಂಡಿದೆ. ಹೀಗಾಗಿ ಅದರ ಆತ್ಮವಿಶ್ವಾಸ ಹೆಚ್ಚಿದೆ. ಸ್ವತಃ ನಾಯಕ ಶಿಖರ್ ಧವನ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರ ಜೊತೆಗೆ ಸ್ಯಾಮ್ ಕ್ಯುರೆನ್, ಜಿತೇಶ‍್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ ಅಬ್ಬರಿಸಬಲ್ಲ ಆಟಗಾರರು. ಈ ಪಂದ್ಯದಲ್ಲಿ ಯಾರ ಕೈ ಮೇಲಾಗುತ್ತದೋ ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಿವ್ಯಾಂಶಿ ತಾಯಿಯಿಂದ ಗಂಭೀರ ಆರೋಪ

IND vs ENG: ಟೀಂ ಇಂಡಿಯಾಗೆ ಬಿಗ್ ಶಾಕ್, ರಿಷಭ್ ಪಂತ್ ಸರಣಿಯಿಂದಲೇ ಔಟ್

ಬ್ರೇಕ್ ನಲ್ಲೂ ಪೆವಿಲಿಯನ್ ನಲ್ಲಿ ಸಾಯಿ ಸುದರ್ಶನ್ ಗೆ ಇದೆಂಥಾ ಅಭ್ಯಾಸ

ಕರುಣ್ ನಾಯರ್ ವೃತ್ತಿ ಜೀವನ ಇಲ್ಲಿಗೇ ಕೊನೆಯಾಯ್ತಾ

ಮುಂದಿನ ಸುದ್ದಿ
Show comments