ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್, ಹೈದರಾಬಾದ್ ಗೆ ಕಾಡಿದ ಮಳೆ ಭಯ

Krishnaveni K
ಬುಧವಾರ, 8 ಮೇ 2024 (16:07 IST)
ಹೈದರಾಬಾದ್: ಐಪಿಎಲ್ 2024 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮಹತ್ವದ ಪಂದ್ಯವಾಡಲಿದೆ. ಆದರೆ ಈ ಪಂದ್ಯಕ್ಕೆ ಈಗ ಮಳೆಯ ಭಯವಿದೆ.

11 ಪಂದ್ಯಗಳಿಂದ 6 ಗೆಲುವು ಕಂಡಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಲಕ್ನೋ 11 ಪಂದ್ಯಗಳಿಂದ 6 ಗೆಲುವುಗಳೊಂದಿಗೆ ರನ್ ರೇಟ್ ಆಧಾರದಲ್ಲಿ 6 ನೇ ಸ್ಥಾನದಲ್ಲಿದೆ. ಈ ಎರಡೂ ತಂಡಕ್ಕೂ ಇಂದು ಪ್ಲೇ ಆಫ್ ಹಾದಿಯ ನಿಟ್ಟಿನಿಂದ ಗೆಲುವು ಅನಿವಾರ್ಯ.

ಆದರೆ ಇಂದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ವರದಿ ಪ್ರಕಾರ ಇಂದು ಹೈದರಾಬಾದ್ ನಲ್ಲಿ ಮಳೆಯಾಗುವ ಸಾಧ‍್ಯತೆಯಿದೆ. ಒಂದು ವೇಳೆ ಮಳೆಯಿಂದಾಗಿ ಒಂದೂ ಓವರ್ ಕಾಣದೇ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ 1 ಅಂಕ ಹಂಚಿಕೆಯಾಗಲಿದೆ.

ಒಂದು ಮಳೆಯಾಗಿ ಮುಂದಿನ ಎಲ್ಲಾ ಪಂದ್ಯಗಳನ್ನೂ ಎರಡೂ ತಂಡಗಳೂ ಗೆದ್ದರೆ ಅಂತಿಮವಾಗಿ ಎರಡೂ ತಂಡಗಳು 17 ಅಂಕಗಳೊಂದಿಗೆ ಲೀಗ್ ಹಂತ ಮುಕ್ತಾಯಗೊಳಿಸಲಿದೆ. ಆಗ ಉಳಿದ ಎರಡು ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಿಎಸ್ ಕೆ 18 ಅಂಕಗಳೊಂದಿಗೆ ಲೀಗ್ ಹಂತ ಮುಗಿಸಿದರೆ ಹೈದರಾಬಾದ್ ಮತ್ತು ಲಕ್ನೋಗೆ ಪ್ಲೇ ಆಫ್ ಹಾದಿ ಬಂದ್ ಆಗಲಿದೆ. ಹೀಗಾಗಿ ಇಂದು ಮಳೆಯಾಗದಿರಲಿ ಎಂದು ಎರಡೂ ತಂಡಗಳೂ ಪ್ರಾರ್ಥಿಸುತ್ತಿವೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಫೇರ್

ಭಾರತ, ದಕ್ಷಿಣ ಆಫ್ರಿಕಾ ಮಹಿಳೆಯರ ವಿಶ್ವಕಪ್ ಪಂದ್ಯ ನಡೆಸಲು ಇಂದು ಇದರದ್ದೇ ಭಯ

ಮಾಜಿ ಪತ್ನಿ ಧನಶ್ರೀ ವಿರುದ್ಧ ಮತ್ತೆ ಯಜುವೇಂದ್ರ ಚಾಹಲ್‌ ಗರಂ: ಮೋಸದ ಆರೋಪಕ್ಕೆ ತಿರುಗೇಟು

ICC Men's Test Player Rankings: ನಂಬರ್ ಒನ್ ಸ್ಥಾನ ಕಾಯ್ದುಕೊಂಡ ಜಸ್ಪ್ರೀತ್ ಬುಮ್ರಾ

Viral video: ಔಟಾದ ಸಿಟ್ಟಿನಲ್ಲಿ ಬೌಲರ್ ಗೆ ಬ್ಯಾಟ್ ನಿಂದ ಹೊಡೆಯಲು ಹೋದ ಪೃಥ್ವಿ ಶಾ

ಮುಂದಿನ ಸುದ್ದಿ
Show comments