Webdunia - Bharat's app for daily news and videos

Install App

ಐಪಿಎಲ್ 2024: ವಿಮಾನದಲ್ಲೇ ಊರೂರು ಅಲೆದಾಡಿದ ಕೋಲ್ಕೊತ್ತಾ ನೈಟ್ ರೈಡರ್ಸ್ ಆಟಗಾರರು

Krishnaveni K
ಬುಧವಾರ, 8 ಮೇ 2024 (15:10 IST)
ಕೊಲ್ಕೊತ್ತಾ: ಐಪಿಎಲ್ ನ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಕೆಟ್ಟ ಹವಾಮಾನದಿಂದಾಗಿ ವಿಮಾನದಲ್ಲೇ ಊರೂರು ಅಲೆದಾಡುವ ಪರಿಸ್ಥಿತಿ ಎದುರಾಯಿತು.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ  ಬಳಿಕ ಕೋಲ್ಕೊತ್ತಾಗೆ ಚಾರ್ಟೆರ್ಡ್ ಫ್ಲೈಟ್ ಏರಿದ್ದ ಕ್ರಿಕೆಟಿಗರಿಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಕೋಲ್ಕೊತ್ತಾದಲ್ಲಿ ಲ್ಯಾಂಡ್ ಆಗಲು ಸಾಧ‍್ಯವಾಗದೇ ಗುವಾಹಟಿ ಕಡೆಗೆ ಮೊದಲು ಡೈವರ್ಟ್ ಮಾಡಲಾಯಿತು.

ನಂತರ ಕೋಲ್ಕೊತ್ತಾದಿಂದ ಕ್ಲಿಯರೆನ್ಸ್ ಸಿಕ್ಕ  ಹಿನ್ನಲೆಯಲ್ಲಿ ಮತ್ತೆ ವಿಮಾನ ಕೋಲ್ಕೊತ್ತಾ ಕಡೆಗೆ ತೆರಳಿತು. ಆದರೆ ಆಗಲೂ ವಿಮಾನಕ್ಕೆ ಕೋಲ್ಕೊತ್ತಾದಲ್ಲಿ ಲ್ಯಾಂಡ್ ಆಗಲು ಸಾಧ‍್ಯವಾಗದೇ ವಾರಣಾಸಿಯಲ್ಲಿ ಲ್ಯಾಂಡ್ ಮಾಡಲಾಯಿತು. ಈ ವಿಮಾನದಲ್ಲಿ ಕೆಕೆಆರ್ ಆಟಗಾರರು, ಸಹಾಯಕ ಸಿಬ್ಬಂದಿಗಳು ಎಲ್ಲರೂ ಇದ್ದರು.

7.25 ಕ್ಕೆ ಕೋಲ್ಕೊತ್ತಾದಲ್ಲಿ ಲ್ಯಾಂಡ್ ಆಗಬೇಕಾಗಿದ್ದ ವಿಮಾನ ರಾತ್ರಿ 11 ಗಂಟೆಯಾದರೂ ಲ್ಯಾಂಡ್ ಆಗಲಿಲ್ಲ. ಕೋಲ್ಕೊತ್ತಾಗೆ ತೆರಳಬೇಕಾಗಿದ್ದ ಆಟಗಾರರು ಹವಾಮಾನ ವೈಪರೀತ್ಯದಿಂದ ಗುವಾಹಟಿ, ವಾರಣಾಸಿ ಎಂದೆಲ್ಲಾ ಸುತ್ತಾಡುವಂತಾಯಿತು. ಕೊನೆಗೆ ವಾರಣಾಸಿಯಲ್ಲೇ ರಾತ್ರಿ ಕಳೆದ ಆಟಗಾರರು ಮರುದಿನ ಕೋಲ್ಕೊತ್ತಾಗೆ ಪ್ರಯಾಣ ಬೆಳೆಸಬೇಕಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮಹಿಳಾ ಚೆಸ್ ವಿಶ್ವ ಕಪ್ ಗೆದ್ದು ಚಾರಿತ್ರಿಕ ಸಾಧನೆ ಮೆರೆದ ಭಾರತದ ದಿವ್ಯಾ ದೇಶ್‌ಮುಖ್‌

ರಿಷಭ್ ಪಂತ್ ಎದೆಗಾರಿಕೆ, ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಸ್ಫೂರ್ತಿ: ಗೌತಮ್ ಗಂಭೀರ್ ಬಿಚ್ಚುಮಾತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments