Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಕೂಲ್ ಆಗಿದ್ದ ಸಂಜು ಸ್ಯಾಮ್ಸನ್ ಮತ್ತೆ ಸಿಟ್ಟಿಗೇಳುವಂತೆ ಮಾಡಿದ ಅಂಪಾಯರ್

Sanju Samson

Krishnaveni K

ದೆಹಲಿ , ಬುಧವಾರ, 8 ಮೇ 2024 (09:40 IST)
Photo Courtesy: Twitter
ದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪಾಯರ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸಿಟ್ಟಿಗೆದ್ದಿದ್ದಾರೆ.

ವೃತ್ತಿ ಜೀವನ ಆರಂಭದಲ್ಲಿ ತೀರಾ ಕೋಪಿಷ್ಠನಾಗಿದ್ದ ಸಂಜು ಸ್ಯಾಮ್ಸನ್ ಇತ್ತೀಚೆಗೆ ಕೂಲ್ ಆಗಿಯೇ ನಡೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದರು. ಅದರಲ್ಲೂ ರಾಜಸ್ಥಾನ್ ತಂಡದ ನಾಯಕರಾದ ಮೇಲಂತೂ ಸಂಜು ಮತ್ತಷ್ಟು ತಾಳ್ಮೆ ಕಲಿತರು. ಟೀಂ ಇಂಡಿಯಾದಲ್ಲಿ ತಮ್ಮನ್ನು ಪದೇ ಪದೇ ಕಡೆಗಣಿಸಿದಾಗಲೂ ಸಂಜು ಆಕ್ರೋಶ ಹೊರಹಾಕಲಿಲ್ಲ.

ಆದರೆ ನಿನ್ನೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 86 ರನ್ ಸಿಡಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸಂಜು ವಿರುದ್ಧ ಅಂಪಾಯರ್ ವಿವಾದಾತ್ಮಕ ಔಟ್ ತೀರ್ಪು ನೀಡಿದರು. ಬೌಂಡರಿ ಗೆರೆ ಬಳಿ ಸಂಜು ನೀಡಿದ ಕ್ಯಾಚ್ ಪಡೆಯುವಾಗ ಫೀಲ್ಡರ್ ಕಾಲು ಕೊಂಚ ಬೌಂಡರಿ ಲೈನ್ ಸ್ಪರ್ಶಿಸಿದಂತಿತ್ತು.

ಆದರೂ ಅಂಪಾಯರ್ ಅನುಮಾನ ಫಲವನ್ನು ಸಂಜುಗೆ ನೀಡದೇ ಬೌಲರ್ ಪರವಾಗಿ ತೀರ್ಪು ನೀಡಿದ್ದಕ್ಕೆ ಅವರು ಸಿಟ್ಟಾದರು. ಅಂಪಾಯರ್ ಜೊತೆ ಮೈದಾನದಲ್ಲೇ ವಾಗ್ವಾದ ನಡೆಸಿದರು. ಸಂಜು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಒಂದು ವೇಳೆ ಸಂಜು ನಿನ್ನೆ ವಿವಾದಾತ್ಮಕ ತೀರ್ಪಿಗೆ ಬಲಿಯಾಗದೇ ಇದ್ದಿದ್ದರೆ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಿದ್ದರು. ಇಷ್ಟು ದೊಡ್ಡ ಟೂರ್ನಮೆಂಟ್ ಮಾಡುವಾಗ ಕಳಪೆ ಅಂಪಾಯರ್ ಗಳನ್ನು ಯಾಕೆ ನೇಮಿಸುತ್ತೀರಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ಒತ್ತಡಕ್ಕೆ ಮಣಿದು ಸೋತ ರಾಜಸ್ಥಾನ್ ರಾಯಲ್ಸ್