Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಮತ್ತೆ ನಂ.1 ಸ್ಥಾನಕ್ಕೇರಲು ಡೆಲ್ಲಿ ಬಗ್ಗುಬಡಿಯಬೇಕಿದೆ ರಾಜಸ್ಥಾನ್ ರಾಯಲ್ಸ್

Sanju Samson

Krishnaveni K

ದೆಹಲಿ , ಮಂಗಳವಾರ, 7 ಮೇ 2024 (12:47 IST)
ದೆಹಲಿ: ಐಪಿಎಲ್ 2024 ರಲ್ಲಿ ಎರನೇ ಸ್ಥಾನಿಯಾಗಿರುವ ರಾಜಸ್ಥಾನ್ ರಾಯಲ್ಸ್ ಇದೀಗ ಮತ್ತೆ ನಂ.1 ಪಟ್ಟ ಗಳಿಸಿಕೊಳ್ಳಲು ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವಾಡಲಿದೆ.

ಇಂದಿನ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಮೆಂಟ್ ನಲ್ಲಿ ಸತತ ಜಯದಿಂದ ಉಬ್ಬಿಹೋಗಿದ್ದ ರಾಜಸ್ಥಾನ್ ಗೆ ಕಳೆದ ಪಂದ್ಯದಲ್ಲಿ ಕೇವಲ 1 ರನ್ ನಿಂದ ಸೋಲು ಆಘಾತ ಸಿಕ್ಕಿತ್ತು. ಈ ಸೋಲಿನಿಂದ ರಾಜಸ್ಥಾನ್ ಈಗ ಎರಡನೇ ಸ್ಥಾನಕ್ಕೆ ಜಾರಿದೆ.

ಒಟ್ಟು 10 ಪಂದ್ಯಗಳಿಂದ 8 ಗೆಲುವು ಕಂಡಿರುವ ರಾಜಸ್ಥಾನ್ ಇದೀಗ ಕೆಕೆಆರ್ ಜೊತೆಗೆ 16 ಅಂಕ ಪಡೆದುಕೊಂಡಿದೆ. ಸದ್ಯಕ್ಕೆ ಕೆಕೆಆರ್ ಜೊತೆಗೆ ಅಂಕದ ವಿಚಾರದಲ್ಲಿ ಭಾರೀ ಪೈಪೋಟಿ ನಡೆಸುತ್ತಿರುವ ರಾಜಸ್ಥಾನ್ ಗೆ ನಂ.1 ಸ್ಥಾನದಲ್ಲಿ ಮುಂದುವರಿಯಲು ಉತ್ತಮ ಅವಕಾಶವಿದೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಗೆ ಕಳೆದ ಪಂದ್ಯದಲ್ಲಿ ಸೋತ ನಂತರ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಒಟ್ಟು 11 ಪಂದ್ಯವಾಡಿರುವ ರಿಷಬ್ ಪಂತ್ ಪಡೆ ಕೇವಲ 10 ಅಂಕ ಸಂಪಾದಿಸಿದೆ. ಕಳೆದ ಪಂದ್ಯದಲ್ಲಿ ಸೋಲು ಡೆಲ್ಲಿ ಅವಕಾಶ ಮುಸುಕಾಗಿಸಿದೆ. ಆದರೆ ಈ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಲು ಪ್ರಯತ್ನಿಸಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಔಟಾದ ಬೇಸರದಲ್ಲಿ ಕಣ್ಣೀರು ಹಾಕಿದ ರೋಹಿತ್ ಶರ್ಮಾ