ಐಪಿಎಲ್ 2024: ಔಟಾದ ಕೋಪದಲ್ಲಿ ಗೋಡೆಗೆ ಗುದ್ದಿದ ರಿಷಬ್ ಪಂತ್

Krishnaveni K
ಶುಕ್ರವಾರ, 29 ಮಾರ್ಚ್ 2024 (11:30 IST)
ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ರನ್ ಗಳ ಸೋಲು ಅನುಭವಿಸಿದೆ. ಈ ಸೋಲು ನಾಯಕ ರಿಷಬ್ ಪಂತ್ ಗೆ ತೀವ್ರ ಹತಾಶೆ ಉಂಟು ಮಾಡಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 173 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 12 ರನ್ ಗಳ ಸೋಲು ಅನುಭವಿಸಿತು. 

ಈ ಪಂದ್ಯದಲ್ಲಿ ಡೆಲ್ಲಿ ನಾಯಕ ರಿಷಬ್ ಪಂತ್ 26 ಎಸೆತಗಳಿಂದ 28 ರನ್ ಗಳಿಸಿದ್ದರು. ತಂಡದ ಚೇಸಿಂಗ್ ನಲ್ಲಿ ಅವರು ಕೊನೆಯವರೆಗೂ ಇದ್ದಿದ್ದರೆ ಬಹುಶಃ ಡೆಲ್ಲಿ ಗೆಲ್ಲುತ್ತಿತ್ತೇನೋ. ಬಹಳ ಸಮಯದ ನಂತರ ಕ್ರಿಕೆಟ್ ಗೆ ಮರಳಿದ ರಿಷಬ್ ಕಳೆದ ಎರಡೂ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಔಟಾದ ಬಳಿಕ ನಿರಾಸೆಯಿಂದಲೇ ಪೆವಿಲಿಯನ್ ಗೆ ತೆರಳಿದ ರಿಷಬ್ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಪೆವಿಲಿಯನ್ ಗೆ ಹೋಗುವ ಹಾದಿಯಲ್ಲಿ ಗೋಡೆಗೆ ಬ್ಯಾಟ್ ನಿಂದ ಗುದ್ದಿದ್ದಾರೆ. ಇದಕ್ಕೆ ಮೊದಲು ಮೊದಲ ಪಂದ್ಯದಲ್ಲೂ ಔಟಾದ ಬಳಿಕ ಬೇಸರಗೊಂಡ ರಿಷಬ್ ಗೆ ಕೊನೆಗೆ ಕೋಚ್ ರಿಕಿ ಪಾಂಟಿಂಗ್ ಸಮಾಧಾನ ಮಾಡಬೇಕಾಗಿ ಬಂದಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟೀಂ ಇಂಡಿಯಾ ಇಂದು ಸರಣಿ ಗೆಲ್ಲಲು ಈ ಬದಲಾವಣೆ ಮಾಡಲೇಬೇಕು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮುಂದಿನ ಸುದ್ದಿ
Show comments