Webdunia - Bharat's app for daily news and videos

Install App

ಐಪಿಎಲ್ 2024: ಖ್ಯಾತ ವೇಗಿಯನ್ನು ತಂಡಕ್ಕೆ ಬರಮಾಡಿಕೊಳ್ಳಲಿದೆ ಆರ್ ಸಿಬಿ

Krishnaveni K
ಶುಕ್ರವಾರ, 15 ಮಾರ್ಚ್ 2024 (14:59 IST)
Photo Courtesy: Twitter
ಬೆಂಗಳೂರು: ಐಪಿಎಲ್ 2024 ರ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಆರ್ ಸಿಬಿ ತಂಡಕ್ಕೆ ಖ್ಯಾತ ವೇಗಿಯೊಬ್ಬರು ಬರಲಿರುವ ಸುದ್ದಿ ಕೇಳಿಬರುತ್ತಿದೆ.

ಇಂಗ್ಲೆಂಡ್ ಮೂಲದ ವೇಗಿ ಟಾಮ್ ಕರನ್ ಗಾಯಗೊಂಡು ಐಪಿಎಲ್ ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಅವರ ಸ್ಥಾನ ತುಂಬಲು ತಂಡಕ್ಕೆ ಈಗ ಪ್ರಮುಖ ವೇಗಿಯ ಅವಶ್ಯಕತೆಯಿದೆ. ಇದಕ್ಕಾಗಿ ಆರ್ ಸಿಬಿ ಇಂಗ್ಲೆಂಡ್ ನ ಮತ್ತೊಬ್ಬ ಖ್ಯಾತ ವೇಗಿ ಜೋಫ್ರಾ ಆರ್ಚರ್ ರನ್ನು ಕರೆತರಲು ಪ್ರಯತ್ನ ನಡೆಸಿದೆ.

ಸದ್ಯದಲ್ಲೇ ಜೋಫ್ರಾ ಆರ್ಚರ್ ಜೊತೆ ಆರ್ ಸಿಬಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಿದೆ ಎನ್ನಲಾಗಿದೆ. ತಂಡಕ್ಕೆ ಈಗ ವೇಗದ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ಗೆ ಸಾಥ್ ನೀಡಲು ಪ್ರಮುಖ ವೇಗಿಯ ಅಗತ್ಯವಿದೆ. ಹೀಗಾಗಿ ಜೋಫ್ರಾರನ್ನು ಕರೆತರಲು ಪ್ರಯತ್ನ ನಡೆದಿದೆ.

ಈಗಾಗಲೇ ಬಹುತೇಕ ಐಪಿಎಲ್ ತಂಡಗಳು ಗಾಯದ ಸಮಸ್ಯೆಯಿಂದಾಗಿ ಒಬ್ಬರಾದ ಮೇಲೊಬ್ಬರಂತೆ ಆಟಗಾರರನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ ಆರ್ ಸಿಬಿಗೂ ಅದೇ ಸಮಸ್ಯೆ ಎದುರಾಗಿದೆ. ಈ ಬಾರಿ ಆರ್ ಸಿಬಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯವಾಡಲಿದೆ. ಈ ಪಂದ್ಯ ಚೆನ್ನೈನಲ್ಲಿ ಮಾರ್ಚ್ 22 ರಂದು ನಡೆಯಲಿದೆ.

  

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments