ಐಪಿಎಲ್ 2024: ಮತ್ತೆ ಅಗ್ರ ಪಟ್ಟಕ್ಕೇರುವ ತವಕದಲ್ಲಿರುವ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಎದುರಾಳಿ

Krishnaveni K
ಬುಧವಾರ, 15 ಮೇ 2024 (12:27 IST)
ಗುವಾಹಟಿ: ಐಪಿಎಲ್ 2024 ರಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಿಂತಿಲ್ಲ. ಇಂದು ರಾಜಸ್ಥಾನ್ ರಾಯಲ್ಸ್ ಮತ್ತೆ ತನ್ನ ಅಗ್ರಪಟ್ಟ ಕಬಳಿಸಲು ಪಂಜಾಬ್ ಕಿಂಗ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.

ಒಟ್ಟು 12 ಪಂದ್ಯಗಳನ್ನಾಡಿ 8 ಗೆಲುವು ಕಂಡಿರುವ ರಾಜಸ್ಥಾನ್ ರಾಯಲ್ಸ್ ಈಗ 16 ಅಂಕ ಪಡೆದುಕೊಂಡಿದೆ. ಸದ್ಯಕ್ಕೆ ರಾಜಸ್ಥಾನ್ ಎರಡನೇ ಸ್ಥಾನದಲ್ಲಿದೆ. ಸತತ ಗೆಲುವುಗಳನ್ನು ಕಂಡು ಬೀಗುತ್ತಿದ್ದ ರಾಜಸ್ಥಾನ್ ಕಳೆದ ಮೂರು ಪಂದ್ಯಗಳ ಸತತ ಸೋಲು ಕಂಡು ಮುಖಭಂಗ ಅನುಭವಿಸಿದೆ.

ಆದರೆ ಪ್ಲೇ ಆಫ್ ಹಂತದಲ್ಲಿರುವಾಗ ರಾಜಸ್ಥಾನ್ ಗೆ ಈಗ ಗೆಲುವು ಅನಿವಾರ್ಯ. ಕಳೆದ ಪಂದ್ಯದಲ್ಲಂತೂ ಕಳಪೆ ಹೊಡೆತಗಳಿಗೆ ಕೈ ಹಾಕಿ ರಾಜಸ್ಥಾನ್ ತಾನಾಗಿಯೇ ಸೋಲೊಪ್ಪಿಕೊಂಡಿತು. ಈಗ ಕೈಗೆ ಸಿಕ್ಕ ತುತ್ತು ಬಾಯಿಗೆ ಬರದಂತಾಗಬಾರದು ಎಂದರೆ ರಾಜಸ್ಥಾನ್ ಮತ್ತೆ ಗೆಲುವಿನ ಹಳಿಗೆ ಬರಲೇಬೇಕಿದೆ.

ಇತ್ತ ಪಂಜಾಬ್ ಕಿಂಗ್ಸ್ ಗೆ ಈ ಫಲಿತಾಂಶ ಏನೂ ಪರಿಣಾಮ ಬೀರದು. 12 ಪಂದ್ಯಗಳಿಂದ ಕೇವಲ 4 ಗೆಲುವು ಕಂಡಿರುವ ಪಂಜಾಬ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸೋತರೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಗೆದ್ದರೆ ಒಂದು ಸ್ಥಾನ ಮೇಲೇರಬಹುದು. ಹೀಗಾಗಿ ಈ ಪಂದ್ಯ ರಾಜಸ್ಥಾನ್ ಪಾಲಿಗೆ ಮಹತ್ವದ್ದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಹೆಸರಿಗೆ, ರೋಹಿತ್ ರಿಯಲ್ ಕ್ಯಾಪ್ಟನ್: ಈ ವಿಡಿಯೋವೇ ಸಾಕ್ಷಿ

IND vs AUS: ರೋ ಕೊ ಜೋಡಿ ತಡೆಯೋರೇ ಇಲ್ಲ: ಕೊನೆಯ ಪಂದ್ಯ ಗೆದ್ದ ಟೀಂ ಇಂಡಿಯಾ

ಅಯ್ಯೋ.. ರೋಹಿತ್ ಶರ್ಮಾ ಈ ಜಾಗಕ್ಕೇ ಬ್ಯಾಟ್ ಇಡುವ ಧೈರ್ಯ ಕೊಹ್ಲಿಗೆ ಮಾತ್ರ ಎಂದ ಫ್ಯಾನ್ಸ್

ರೋಹಿತ್ ಶರ್ಮಾ ಶತಕ: ನಮ್ದು ಇನ್ನೂ ಕತೆ ಮುಗಿದಿಲ್ಲ ಈಗ ಶುರು ಎಂದ ಹಿಟ್ ಮ್ಯಾನ್

ಮುಂದಿನ ಸುದ್ದಿ
Show comments