ಐಪಿಎಲ್ 2024: ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ ನಡುವೆ ಇಂದಿನ ಪಂದ್ಯ

Krishnaveni K
ಶನಿವಾರ, 13 ಏಪ್ರಿಲ್ 2024 (09:10 IST)
ಮೊಹಾಲಿ: ಐಪಿಎಲ್ 2024 ರಲ್ಲಿ ಇಂದು ರಾಜರುಗಳ ಕದನ. ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಇಂದು ಮುಖಾಮುಖಿಯಾಗುತ್ತಿದೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್‍ ರಾಯಲ್ಸ್ ಈ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಐದು ಪಂದ್ಯಗಳನ್ನಾಡಿರುವ ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಮಾತ್ರ ಸೋತಿತ್ತು. ಉಳಿದೆಲ್ಲಾ ಪಂದ್ಯಗಳಲ್ಲಿ ಗೆಲುವು ಕಂಡಿತ್ತು. ಹೀಗಾಗಿ ಈ ಟೂರ್ನಿಯಲ ಬಲಿಷ್ಠ ತಂಡವಾಗಿದೆ. ಸದ್ಯಕ್ಕೆ ರಾಜಸ್ಥಾನ್ ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ.

ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ತಂಡ ಎಂತಹದ್ದೇ ಪರಿಸ್ಥಿತಿಯಲ್ಲಿದ್ದರೂ ಇವರಿಬ್ಬರೇ ಬ್ಯಾಟಿಂಗ್ ಗೇರ್ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ನಲ್ಲೂ ರಾಜಸ್ಥಾನ್ ಮೇಲುಗೈ ಹೊಂದಿದೆ. ಕಳೆದ ಪಂದ್ಯದಲ್ಲಿ ಹೋರಾಡಿ ಸೋತಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಗೆಲುವನ್ನೇ ಕಂಡಿದೆ.

ಇತ್ತ ಪಂಜಾಬ್ ಕಿಂಗ್ಸ್ ಆಡಿದ 5 ಪಂದ್ಯಗಳ ಪೈಕಿ ಗೆದ್ದಿದ್ದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಯಾಕೋ ಶಿಖರ್ ಧವನ್ ಪಡೆಗೆ ಕೆಲವೊಂದು ಪಂದ್ಯದಲ್ಲಿ ಉತ್ತಮವಾಗಿ ಆಡಿಯೂ ಅದೃಷ್ಟ ಕೈ ಹಿಡಿದಿರಲಿಲ್ಲ. ಇಂದು ತವರು ನೆಲದಲ್ಲೇ ನಡೆಯುವ ಪಂದ್ಯವಾಗಿರುವುದರಿಂದ ಗೆಲ್ಲುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹೋಗು ಬೌಲಿಂಗ್ ಮಾಡು, ಕಣ್‌ ಸನ್ನೆಯಲ್ಲೇ ಕುಲ್‌ದೀಪ್‌ಗೆ ಗದರಿದ ರೋಹಿತ್, ಎಲ್ಲರಿಗೂ ನಗುವೋ ನಗು

IND VS SA: ಟಾಸ್ ಸೋತರು ಭಾರತಕ್ಕೆ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video

ಬೆಳಗಾವಿ ಅಧಿವೇಶನದಲ್ಲಿ ಈ ಒಂದು ವಿಚಾರ ಚರ್ಚೆಯಾಗಬೇಕು ಎಂದ ವಿಜಯೇಂದ್ರ

IND vs SA: ರನ್ ಗಾಗಿ ಪರದಾಡುತ್ತಿದ್ದ ಆಫ್ರಿಕಾ ಕಷ್ಟ ನಿವಾರಿಸಿದ ರನ್ ಮೆಷಿನ್ ಪ್ರಸಿದ್ಧ ಕೃಷ್ಣ

ಮುಂದಿನ ಸುದ್ದಿ
Show comments