Webdunia - Bharat's app for daily news and videos

Install App

ಐಪಿಎಲ್ 2024 ರ ಸಮಾನ ದುಃಖಿಗಳು ಪಂಜಾಬ್ ಕಿಂಗ್ಸ್-ಗುಜರಾತ್ ಟೈಟನ್ಸ್ ನಡುವೆ ಇಂದಿನ ಪಂದ್ಯ

Krishnaveni K
ಭಾನುವಾರ, 21 ಏಪ್ರಿಲ್ 2024 (10:10 IST)
ಮೊಹಾಲಿ: ಐಪಿಎಲ್ 2024 ರಲ್ಲಿ ಇಂದು ಸೋಲುಗಳಿಂದ ಕಂಗೆಟ್ಟ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಮೊಹಾಲಿಯಲ್ಲಿ ಪಂದ್ಯ ನಡೆಯಲಿದೆ. ಇದು ಇಂದಿನ ಎರಡನೇ ಪಂದ್ಯವಾಗಿದೆ.

ಪಂಜಾಬ್ ಕಿಂಗ್ಸ್ ಗೆ ಯಾಕೋ ಅದೃಷ್ಟವೇ ಕೈ ಹಿಡಿಯುತ್ತಿಲ್ಲ ಎನ್ನಬಹುದು. ಈ ಬಾರಿ ಪಂಜಾಬ್ ಒಟ್ಟು ನಾಲ್ಕು ಬಾರಿ ಫೈನಲ್ ಓವರ್ ನಲ್ಲಿ ಸೋತು ನಿರಾಸೆ ಅನುಭವಿಸಿದೆ. ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಆಟವಾಡಿದರೂ ಅಂತಿಮ ಓವರ್ ಗಳಲ್ಲಿ ಜಾರಿ ಬೀಳುವ ಚಾಳಿ ಮುಂದುವರಿಸಿದೆ.

ಇದು ಶಿಖರ್ ಧವನ್ ಪಡೆಗೆ ನುಂಗಲಾರದ ತುತ್ತಾಗಿದೆ. ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಪಂಜಾಬ್ ಗೆದ್ದಿರುವುದು ಎರಡು ಪಂದ್ಯಗಳಲ್ಲಿ ಮಾತ್ರ. ಅದರಲ್ಲೂ ಕಳೆದ 3 ಪಂದ್ಯಗಳಲ್ಲಿ ಸತತವಾಗಿ ಸೋಲು ಅನುಭವಿಸಿದೆ. ಇದರಿಂದಾಗಿ ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ಜಾರಿದೆ.

ಅತ್ತ ಗುಜರಾತ್ ಸ್ಥಿತಿಯೂ ಹೆಚ್ಚೇನೂ ಉತ್ತಮವಾಗಿಲ್ಲ. ಕಳೆದ ಬಾರಿಯ ರನ್ನರ್ ಅಪ್ ತಂಡ ಈ ಬಾಗಿ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಕ್ಲಿಕ್ ಆಗಿಲ್ಲ.  ಆರಂಭಿಕ ಎರಡು ಪಂದ್ಯಗಳಲ್ಲಿ ಕ್ಲಿಕ್ ಆಗಿದ್ದು ಬಿಟ್ಟರೆ ಮತ್ತೆ ಯಾಕೋ ಅದೃಷ್ಟ ಕೈಕೊಟ್ಟಿದೆ. ಕಳೆದ ಪಂದ್ಯದಲ್ಲಂತೂ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು.

ಸದ್ಯಕ್ಕೆ ಅಂಕಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿರುವ ಗುಜರಾತ್ ಗೆ ಮತ್ತೆ ತನ್ನ ಹಳೆಯ ಖದರ್ ಗೆ ತಕ್ಕಂತೆ ಆಡುವ ಅನಿವಾರ್ಯತೆಯಿದೆ. ಇತ್ತ ಪಂಜಾಬ್ ಗೂ ಗೆಲುವು ಅನಿವಾರ್ಯವಾಗಿದೆ. ಈ ಸಮಾನದುಃಖಿಗಳ ಪಂದ್ಯದಲ್ಲಿ ಗೆಲ್ಲುವವರು ಯಾರು ಎಂದು ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup Cricket: ಫೈನಲ್‌ನಲ್ಲಿ ಭಾರತ–ಪಾಕ್‌ ಮೊದಲ ಬಾರಿ ಮುಖಾಮುಖಿಗೆ ವೇದಿಕೆ ಸಜ್ಜು

ಅಭಿಷೇಕ್ ಬಚ್ಚನ್ ಔಟ್ ಮಾಡಿ ಎಂದ ಶೊಯೇಬ್ ಅಖ್ತರ್: ಬಚ್ಚನ್ ಫನ್ನಿ ರಿಯಾಕ್ಷನ್ ನೋಡಿ

Asia Cup Cricket: ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್

ಹೊಡೆದೇ ಹಾಕ್ತೀವಿ: ಏಷ್ಯಾ ಕಪ್ ಫೈನಲ್ ಗೆ ಮುನ್ನ ಭಾರತದ ಬಗ್ಗೆ ಪಾಕಿಸ್ತಾನಿಯರ ವೀರಾವೇಷದ ಮಾತುಗಳು

IND vs SL: ದಸನು ಶಾನಕ ಮಾಡಿದ ಆ ತಪ್ಪಿನಿಂದ ಟೀಂ ಇಂಡಿಯಾಗೆ ಗೆಲುವು

ಮುಂದಿನ ಸುದ್ದಿ
Show comments