ಹಾರ್ದಿಕ್ ಪಾಂಡ್ಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದ ರಾಬಿನ್ ಉತ್ತಪ್ಪ

Krishnaveni K
ಭಾನುವಾರ, 21 ಏಪ್ರಿಲ್ 2024 (09:37 IST)
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕರ್ನಾಟಕ ಮೂಲದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ರಾಬಿನ್ ಉತ್ತಪ್ಪ ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮುಂಬೈ ತಂಡದ ನಾಯಕನಾದ ಮೇಲೆ ಹಾರ್ದಿಕ್ ಸತತವಾಗಿ ಟೀಕೆ ಎದುರಿಸುತ್ತಲೇ ಇದ್ದಾರೆ. ಅವರು ಎಲ್ಲೇ ಹೋದರೂ ಅಭಿಮಾನಿಗಳು ಅವರನ್ನು ಮೂದಲಿಸುತ್ತಿದ್ದಾರೆ.

ಲೇವಡಿಗಳಿಗೆ ಹಾರ್ದಿಕ್ ಮೇಲ್ನೋಟಕ್ಕೆ ಕಿವಿಗೊಡುತ್ತಿಲ್ಲ ಎನಿಸಿದರೂ ಇದು ಅವರನ್ನು ಕಾಡುತ್ತಿದೆ. ಸತತವಾಗಿ ತಮ್ಮನ್ನು ಟೀಕೆ ಮಾಡುತ್ತಿರುವುದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅಭಿಮಾನಿಗಳ ಮನಸ್ಸು ನಮಗೂ ಅರ್ಥವಾಗುತ್ತದೆ. ಆದರೆಯಾವುದೇ ಆಟಗಾರನನ್ನೂ ಈ ಮಟ್ಟಿಗೆ ಲೇವಡಿ ಮಾಡಬಾರದು. ಇದರಿಂದ ಖಂಡಿತವಾಗಿಯೂ ಹಾರ್ದಿಕ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ರಾಬಿನ್ ಉತ್ತಪ್ಪ ಸಂದರ್ಶನದಲ್ಲಿ ಹೇಳಿದ್ದಾರೆ.

ಅವರ ಈ ಹೇಳಿಕೆ ಈಗ ಸಂಚಲನ ಮೂಡಿಸಿದೆ. ಯಾವ ಅಭಿಮಾನಿಗಳೂ ಈ ರೀತಿ ಅಸಭ್ಯವಾಗಿ ವರ್ತಿಸಬಾರದು. ಆಟಗಾರರನ್ನು ನೋಡಿ ನಗಬಾರದು.ಇದು ಹಾರ್ದಿಕ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಫೇರ್

ಭಾರತ, ದಕ್ಷಿಣ ಆಫ್ರಿಕಾ ಮಹಿಳೆಯರ ವಿಶ್ವಕಪ್ ಪಂದ್ಯ ನಡೆಸಲು ಇಂದು ಇದರದ್ದೇ ಭಯ

ಮಾಜಿ ಪತ್ನಿ ಧನಶ್ರೀ ವಿರುದ್ಧ ಮತ್ತೆ ಯಜುವೇಂದ್ರ ಚಾಹಲ್‌ ಗರಂ: ಮೋಸದ ಆರೋಪಕ್ಕೆ ತಿರುಗೇಟು

ICC Men's Test Player Rankings: ನಂಬರ್ ಒನ್ ಸ್ಥಾನ ಕಾಯ್ದುಕೊಂಡ ಜಸ್ಪ್ರೀತ್ ಬುಮ್ರಾ

Viral video: ಔಟಾದ ಸಿಟ್ಟಿನಲ್ಲಿ ಬೌಲರ್ ಗೆ ಬ್ಯಾಟ್ ನಿಂದ ಹೊಡೆಯಲು ಹೋದ ಪೃಥ್ವಿ ಶಾ

ಮುಂದಿನ ಸುದ್ದಿ
Show comments