ಐಪಿಎಲ್ 2024: ಪ್ಲೇ ಆಫ್ ಪಂದ್ಯದಲ್ಲಿ ಕೆಕೆಆರ್ ಮಾಡಿದ ದಾಖಲೆಗಳ ವಿವರ ಇಲ್ಲಿದೆ

Krishnaveni K
ಬುಧವಾರ, 22 ಮೇ 2024 (08:50 IST)
Photo Courtesy: X
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಲ್ಕನೇ ಬಾರಿಗೆ ಫೈನಲ್ ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಕೆಕೆಆರ್ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಚ್ಆರ್ ಎಚ್ 159 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಕೆಕೆಆರ್ 2 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ಐಪಿಎಲ್ ನಲ್ಲಿ ಹೆಚ್ಚು ಬಾಲ್ ಬಾಕಿ ಇರುವಂತೆಯೇ ಗೆದ್ದ ನಾಲ್ಕನೇ ತಂಡವೆನಿಸಿಕೊಂಡಿತು.

ಈ ಪಂದ್ಯದಲ್ಲಿ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ ಅಜೇಯ 58 ರನ್ ಸಿಡಿಸಿದರು. ಈ ಮೂಲಕ ಪ್ಲೇ ಆಫ್ ಪಂದ್ಯದಲ್ಲಿ 50 ಪ್ಲಸ್ ಸ್ಕೋರ್ ಮಾಡಿದ ನಾಲ್ಕನೇ ಆಟಗಾರನೆನಿಸಿಕೊಂಡರು. ಇದಕ್ಕೆ ಮೊದಲು ಧೋನಿ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಈ ದಾಖಲೆ ಮಾಡಿದ್ದಾರೆ.

ಅತೀ ಹೆಚ್ಚು ಬಾರಿ ಐಪಿಎಲ್ ಗೆ ಲಗ್ಗೆಯಿಟ್ಟ ತಂಡಗಳ ಪಟ್ಟಿಯಲ್ಲಿ ಕೆಕೆಆರ್ ಈಗ ಮೂರನೇ ಸ್ಥಾನಕ್ಕೇರಿತು. ಸಿಎಸ್ ಕೆ 10 ಬಾರಿ, ಮುಂಬೈ ಇಂಡಿಯನ್ಸ್ 6 ಬಾರಿ ಮತ್ತು ಕೆಕೆ ಆರ್ ಈಗ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಗೇರಿದೆ. ಆರ್ ಸಿಬಿ ಮೂರು ಬಾರಿ ಈ ಸಾಧನೆ ಮಾಡಿದೆ.  ಕೆಕೆಆರ್ ತಂಡದ ವೆಂಕಟೇಶ್ ಅಯ್ಯರ್ ಐಪಿಎಲ್ ಪ್ಲೇ ಆಫ್ ನಲ್ಲಿ ತಾವೊಬ್ಬ ಉಪಯುಕ್ತ ಆಟಗಾರ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು. ಪ್ಲೇ ಆಫ್ ಪಂದ್ಯದಗಳಲ್ಲಿ ನಾಲ್ಕು ಬಾರಿ ಆಡಿರುವ ವೆಂಕಟೇಶ್ ಮೂರನೇ ಬಾರಿ ಅರ್ಧಶತಕ ಬಾರಿಸಿದರು. ಅಲ್ಲದೆ ಶ್ರೇಯಸ್ ಅಯ್ಯರ್ ಜೊತೆಗೂಡಿ ಕೆಕೆಆರ್ ಪರ ಪ್ಲೇ ಆಫ್ ಪಂದ್ಯಗಳಲ್ಲಿ ಎರಡನೇ ಗರಿಷ್ಠ ರನ್ ಜೊತೆಯಾಟ (97 ರನ್)ವಾಡಿದ ದಾಖಲೆ ಮಾಡಿದರು. ಇದೀಗ ಫೈನಲ್ ನಲ್ಲಿ ಯಾವ ತಂಡ ಎದುರಾಗುತ್ತದೆ ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂದಾನ ಶೀಘ್ರದಲ್ಲೇ ಹಣೆಮಣೆಗೆ: ಇಂದೋರ್‌ನ ಸೊಸೆ ಎಂದಿದ್ಯಾರು ಗೊತ್ತಾ

ಮುಂದಿನ ಸುದ್ದಿ
Show comments