Select Your Language

Notifications

webdunia
webdunia
webdunia
webdunia

ಮೈ ಕೈ ಎಲ್ಲಾ ಡ್ಯಾಮೇಜು, ಯಾವ ಸರ್ಜರಿಗೊಳಗಾಗಲಿದ್ದಾರೆ ಧೋನಿ

Dhoni

Krishnaveni K

ರಾಂಚಿ , ಮಂಗಳವಾರ, 21 ಮೇ 2024 (11:59 IST)
ರಾಂಚಿ: ಐಪಿಎಲ್ 2024 ರಲ್ಲಿ ಟೂರ್ನಿಯುದ್ದಕ್ಕೂ ಮೈ ಕೈ ನೋವು ಮಾಡಿಕೊಂಡೇ ಆಡಿದ್ದ ಚೆನ್ನ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಧೋನಿ ಈಗ ಸರ್ಜರಿಗಳೊಗಾಗಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ ನಲ್ಲಿ ಚೆನ್ನೈ ತಂಡದ ವಿಕೆಟ್ ಕೀಪರ್ ಆಗಿದ್ದ ಧೋನಿ ಗಾಯದಿಂದಾಗಿ ಬ್ಯಾಟಿಂಗ್ ಗೆ ಕೆಳ ಕ್ರಮಾಂಕದಲ್ಲಿ ಆಡಲಿಳಿಯುತ್ತಿದ್ದರು. ಆಟದ ಬಳಿಕ ಕಾಲಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಓಡಾಡುತ್ತಿದ್ದರು. ಅವರ ಗಾಯದ ಕಾರಣದಿಂದಲೇ ಈ ಬಾರಿ ಐಪಿಎಲ್ ನಲ್ಲಿ ಅವರಿಗೆ 100 ಶೇಕಡಾ ಸಾಮರ್ಥ್ಯದೊಂದಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.

ಮೂಲಗಳ ಪ್ರಕಾರ ಧೋನಿ ಈಗ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಲಿದ್ದಾರಂತೆ. ಧೋನಿ ಮಾಂಸಖಂಡಗಳ ಸಮಸ್ಯೆಗೊಳಗಾಗಿದ್ದು ಇದಕ್ಕಾಗಿ ಲಂಡನ್ ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ ಎನ್ನಲಾಗಿದೆ. ಅದಾದ ಬಳಿಕ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಕಳೆದ ಬಾರಿಯೂ ಐಪಿಎಲ್ ಮುಗಿದ ಬಳಿಕ ಧೋನಿ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈ ಬಾರಿಯೂ ಅವರು ಗಾಯದ ನೋವಿನ ನಡುವೆಯೇ ಆಡಿದ್ದಾರೆ. ಶಸ್ತ್ರಚಿಕಿತ್ಸೆಗೊಳಗಾದರೆ ಮತ್ತೆ ಸುಧಾರಿಸಿಕೊಳ್ಳಲು ಎರಡು ತಿಂಗಳು ಬೇಕಾಗುತ್ತದೆ. ಅದಾದ ಬಳಿಕವಷ್ಟೇ ಅವರು ಮುಂದಿನ ಐಪಿಎಲ್ ನಲ್ಲಿ ಆಡಬೇಕೋ ಇಲ್ಲವೋ ಎಂಬ ಬಗ್ಗೆ ತೀರ್ಮಾನ ಕೈಗೊಳ‍್ಳಲಿದ್ದಾರೆ. ಈ ಐಪಿಎಲ್ ನ ಮಧ್ಯದಲ್ಲೇ ಅವರಿಗೆ ಗಾಯದಿಂದಾಗಿ ವೈದ್ಯರು ವಿಶ್ರಾಂತಿಗೆ ಸೂಚಿಸಿದರೂ ಗಣನೆಗೆ ತೆಗೆದುಕೊಳ್ಳದೇ ನೋವು ನಿವಾರಕಗಳನ್ನು ನುಂಗಿ ಆಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ವಿರುದ್ಧ ಸೋಲಿನ ಬಳಿಕ ಜಡೇಜಾ ಜೊತೆ ಬಾರ್ ನಲ್ಲಿ ಕೂತಿದ್ದ ಧೋನಿ