Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆ ಗೆಲ್ಲುವ ತವಕ

Delhi Capitals

Krishnaveni K

ಅಹಮ್ಮದಾಬಾದ್ , ಬುಧವಾರ, 17 ಏಪ್ರಿಲ್ 2024 (10:17 IST)
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ಗುಜರಾತ್ ಈ ಸೀಸನ್ ನಲ್ಲಿ ಆರಂಭ ಉತ್ತಮವಾಗಿತ್ತು. ಆದರೆ ಇದರ ನಡುವೆ ಕೆಲವು ಪಂದ್ಯಗಳನ್ನು ಸೋತು ಹಿನ್ನಡೆ ಅನುಭವಿಸಿತು. ಆದರೆ ಸತತ ಎರಡು ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್ ಪಡೆ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿತ್ತು.

ಈ ಟೂರ್ನಿಯಲ್ಲಿ ಒಟ್ಟು 6 ಪಂದ್ಯವಾಡಿರುವ ಗುಜರಾತ್ ಗೆದ್ದಿದ್ದು 3 ರಲ್ಲಿ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಗುಜರಾತ್ 6 ನೇ ಸ್ಥಾನದಲ್ಲಿದೆ. ಹೊಸ ನಾಯಕತ್ವ ಜೊತೆಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಅನುಪಸ್ಥಿತಿ ಗುಜರಾತ್ ಗೆ ಈ ಬಾರಿ ಬಹುವಾಗಿ ಕಾಡಿದೆ. ಆದರೆ ಆಶಿಷ್ ನೆಹ್ರಾ ಸ್ಪೂರ್ತಿದಾಯಕ ಕೋಚಿಂಗ್ ತಂಡಕ್ಕೆ ಭರವಸೆ ಮೂಡಿಸಿದೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಸತತ ಎರಡು ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಗೆಲುವು ಕಂಡಿತ್ತು. ರಿಷಬ್ ಪಂತ್ ಒಂದು ವರ್ಷಗಳ ಬಳಿಕ ಕ್ರಿಕೆಟ್ ಕಣಕ್ಕೆ ಮರಳಿದ್ದರಿಂದ ಅವರ ನಾಯಕತ್ವದಲ್ಲಿ ಡೆಲ್ಲಿ ಮೇಲೆ ಅಪಾರ ನಿರೀಕ್ಷೆಯಿತ್ತು. ನಿರೀಕ್ಷೆಗೆ ತಕ್ಕಷ್ಟು ಡೆಲ್ಲಿಯಿಂದ ಪ್ರದರ್ಶನ ಬಂದಿಲ್ಲ.

ಆದರೆ ಕಳೆದ ಪಂದ್ಯದಲ್ಲಿ ರಿಷಬ್ ಆಡಿದ ರೀತಿ ಅವರು ಫಾರ್ಮ್ ಗೆ ಮರಳಿರುವುದರ ಸೂಚನೆಯಾಗಿದೆ. ಡೆಲ್ಲಿ ಇದುವರೆಗೆ ಆಡಿದ 6 ಪಂದ್ಯಗಳ ಪೈಕಿ 2 ರಲ್ಲಿ ಮಾತ್ರ ಗೆಲುವು ಕಂಡಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿರುವ ಡೆಲ್ಲಿಗೆ ಪ್ಲೇ ಆಫ್ ಹಂತ ಕಷ್ಟವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ವಮಿಕಾ ತಂದೆ ಕೊಹ್ಲಿಯಂತೆ, ಮಗ ಅಕಾಯ್ ಅಮ್ಮ ಅನುಷ್ಕಾ: ಭಾರತಕ್ಕೆ ಬಂದ ವಿರಾಟ್ ಪುತ್ರ