Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಪ್ಲೇ ಆಫ್ ಗೇರಿದ ಮೊದಲ ತಂಡ ಗುಜರಾತ್

ಐಪಿಎಲ್ 2023: ಪ್ಲೇ ಆಫ್ ಗೇರಿದ ಮೊದಲ ತಂಡ ಗುಜರಾತ್
ಅಹಮ್ಮದಾಬಾದ್ , ಮಂಗಳವಾರ, 16 ಮೇ 2023 (07:40 IST)
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 34 ರನ್ ಗಳ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್ ಪ್ಲೇ ಆಫ್ ಗೇರಿದ ಮೊದಲ ತಂಡವೆಂಬ ಖ್ಯಾತಿಗೊಳಗಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಶುಬ್ಮನ್ ಗಿಲ್ ಅವರ ಚೊಚ್ಚಲ ಶತಕದ ನೆರವಿನಿಂದ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಗಿಲ್ 101 ರನ್ ಗಳಿಸಿದರು. ಸಾಯ್ ಸುದರ್ಶನ್ 47 ರನ್ ಗಳಿಸಿದರು. ಆದರೆ ನಾಲ್ವರು ಬ್ಯಾಟಿಗರು ಶೂನ್ಯಕ್ಕೆ ಔಟಾದರು. ಹೈದರಾಬಾದ್ ಪರ ವೇಗಿ ಭುವನೇಶ್ವರ್ ಕುಮಾರ್ 5 ವಿಕೆಟ್ ಗಳ ಗೊಂಚಲು ಪಡೆದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ಹೆನ್ರಿಚ್ ಕ್ಲಾಸನ್ 64 ರನ್ ಸಿಡಿಸಿದರೆ ಬ್ಯಾಟಿಂಗ್ ನಲ್ಲೂ ಮಿಂಚಿದ ಭುವನೇಶ್ವರ್ ಕುಮಾರ್ 27 ರನ್ ಗಳಿಸಿದರು. ಗುಜರಾತ್ ಪರ ವೇಗಿ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ತಲಾ 4 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಚೆನ್ನೈಗೆ ಕೆಕೆಆರ್ ಎದುರಾಳಿ