Publish Date: Thu, 27 Aug 2026 (12:27 IST)
Updated Date: Thu, 27 Aug 2026 (12:31 IST)
ಕೊಲಂಬೊ: ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾಗೆ ಫಾಲೋ ಆನ್ ಹೇರಿದ ಟೀಂ ಇಂಡಿಯಾ ತಲೆಮೇಲೆ ಕೈ ಹೊತ್ತು ಕೂರುವ ಸ್ಥಿತಿಯಾಗಿದೆ. ಇತ್ತ ಪೆವಿಲಿಯನ್ ನಲ್ಲೇ ಕೋಚ್ ಗಂಭೀರ್ ಸಿಟ್ಟು ಪ್ರದರ್ಶಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ನಾಲ್ಕೂ ದಿನ ಟೀಂ ಇಂಡಿಯಾ ತನ್ನ ಪಾರಮ್ಯ ಮರೆದಿತ್ತು. ಮೊದಲ ಇನಿಂಗ್ಸ್ ನಲ್ಲಿ 503 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಲಂಕಾ ಕೇವಲ 290 ರನ್ ಗಳಿಗೆ ಆಲೌಟ್ ಆದಾಗ ಟೀಂ ಇಂಡಿಯಾ ಎದುರಾಳಿಗೆ ಫಾಲೋ ಆನ್ ಹೇರಿ ಬೀಗಿತ್ತು.
ಆದರೆ ಐದನೇ ದಿನ ಲಂಕಾ ಬ್ಯಾಟಿಗರು ದಿಟ್ಟ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಿದೆ. ಇದರೊಂದಿಗೆ 116 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ವಿಶೇಷವಾಗಿ ಸೋನಲ್ ದಿನುಶಾ, ಕೇಶರಾ ನುವಾಂತ ಸಂಪೂರ್ಣ ರಕ್ಷಣಾತ್ಮಕ ಆಟವಾಡುವ ಮೂಲಕ ವಿಕೆಟ್ ಕಳೆದುಕೊಳ್ಳದೇ ಟೀಂ ಇಂಡಿಯಾ ಗೆಲುವಿಗೆ ತಣ್ಣೀರೆರಚಲು ಹೊರಟಿದ್ದಾರೆ. ಸದ್ಯಕ್ಕೆ ಲಂಕಾಗೆ ಗೆಲುವು ಸಾಧ್ಯವಿಲ್ಲ. ಆದರೆ ಪಂದ್ಯವನ್ನು ಬಹುತೇಕ ಡ್ರಾನತ್ತ ಕೊಂಡೊಯ್ಯುವ ಪ್ರಯತ್ನದಲ್ಲಿದೆ. ಸೋನಲ್ 106 ಎಸೆತ ಎದುರಿಸಿದ್ದು 55 ರನ್ ಗಳಿಸಿದ್ದರೆ ನುವಾಂತ ಬರೋಬ್ಬರಿ 149 ಎಸೆತ ಎದುರಿಸಿ 46 ರನ್ ಗಳಿಸಿ ಟೀಂ ಇಂಡಿಯಾ ಬೌಲರ್ ಗಳನ್ನು ಹೈರಾಣಾಗಿಸಿದ್ದಾರೆ. ಇಂದಿನ ದಿನ ಭಾರತಕ್ಕೆ ಒಂದೇ ಒಂದು ವಿಕೆಟ್ ದಕ್ಕಿಲ್ಲ. ಇದರಿಂದ ಕೋಚ್ ಗಂಭೀರ್ ಸಿಟ್ಟಾಗಿದ್ದಾರೆ. ಪೆವಿಲಿಯನ್ ನಲ್ಲಿ ಬೌಲರ್ ಗಳ ಪ್ರದರ್ಶನದ ವಿರುದ್ಧ ಹತಾಶೆಯ ಭಾವ ತೋರಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಭಾರತ ಈ ಪಂದ್ಯವನ್ನು ಗೆಲ್ಲದೇ ಹೋದರೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಕನಸು ಕ್ಷೀಣವಾಗಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ