Publish Date: Wed, 26 Aug 2026 (11:29 IST)
Updated Date: Wed, 26 Aug 2026 (11:31 IST)
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದು ಆಕ್ರಮಣಕಾರೀ ನಿರ್ಧಾರ ಕೈಗೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ 503 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಾಗ ಡಿಕ್ಲೇರ್ ಘೋಷಿಸಿ ನಾಯಕ ಶುಭಮನ್ ಗಿಲ್ ತಮ್ಮ ತಂಡ ಅಗ್ರೆಸಿವ್ ಆಟಕ್ಕೆ ಒತ್ತು ನೀಡುವುದಾಗಿ ಸೂಚನೆ ನೀಡಿದರು. ಇದೀಗ ಮೊದಲ ಇನಿಂಗ್ಸ್ ನಲ್ಲಿ ಲಂಕಾ ಕೇವಲ 290 ರನ್ ಗಳಿಗೆ ಆಲೌಟ್ ಆದ ಬಳಿಕ ಟೀಂ ಇಂಡಿಯಾ ಮತ್ತೊಂದು ಅಗ್ರೆಸಿವ್ ನಿರ್ಧಾರ ತೆಗೆದುಕೊಂಡಿತು.
ಲಂಕಾ ತಂಡದ ಮೇಲೆ ಫಾಲೋ ಆನ್ ಹೇರಿದ ಟೀಂ ಇಂಡಿಯಾ ಇದು ಯುವ ಭಾರತ ತಂಡ ಎಂದು ನಿರೂಪಿಸಿತು. ಇದೀಗ ಲಂಕಾ ಎರಡನೇ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದೆ. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಲಂಕಾಗೆ ಇನ್ನೂ 165 ರನ್ ಬೇಕಾಗಿದ್ದು ಅದಾದ ಬಳಿಕ ಎದುರಾಳಿಗೆ ಗೆಲುವಿನ ಗುರಿ ನೀಡುವ ಒತ್ತಡದಲ್ಲಿದೆ.
ಲಂಕಾ ಪರ ಮೊದಲ ಇನಿಂಗ್ಸ್ ನಲ್ಲಿ ಸೋನಲ್ ದಿನುಶಾ 103 ರನ್ ಗಳ ಶತಕದ ಇನಿಂಗ್ಸ್ ಆಡಿ ಗಮನ ಸೆಳೆದರು. ಪಸೀಂದು ಸೂರ್ಯಬಂದಾರ 80 ರನ್ ಗಳಿಸಿದ್ದರು. ಆದರೆ ಉಳಿದವರಿಂದ ತಕ್ಕ ಸಾಥ್ ಸಿಗದೇ ಲಂಕಾ ಸೊರಗಿತು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ