Daily Horoscope
✕

INDvsSL: ವಿಕೆಟ್ ಬೀಳುತ್ತಿಲ್ಲ ಎಂದಾಗ ನಂಬಿಕೆಯ ಮೊರೆ ಹೋದ ಸಿರಾಜ್, ಮ್ಯಾಜಿಕ್ ಮಾಡಿದಾಗ ಬಿತ್ತು ವಿಕೆಟ್

ಕೃಷ್ಣವೇಣಿ ಕೆ
ಗುರುವಾರ, 27 ಆಗಸ್ಟ್ 2026 (14:38 IST)
Photo Credit: X
ಕೊಲಂಬೊ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದ ವೇಳೆಯಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ನಡೆಸಿದ ಸಣ್ಣ 'ಮ್ಯಾಜಿಕ್' ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮೊದಲ ಸೆಷನ್‌ನಲ್ಲಿ ಸತತವಾಗಿ ಬೌಲಿಂಗ್ ಮಾಡಿದರೂ ಭಾರತೀಯ ಬೌಲರ್‌ಗಳಿಗೆ ವಿಕೆಟ್ ಮುರಿಯಲು ಸಾಧ್ಯವಾಗಿರಲಿಲ್ಲ. ಶ್ರೀಲಂಕಾ ತಂಡ  ಗಟ್ಟಿಯಾಗಿ ನೆಲೆಯೂರಿತ್ತು. ಈ ವೇಳೆ ವಿಕೆಟ್ ಬರದೆ ಕಂಗೆಟ್ಟಿದ್ದ ಸಿರಾಜ್, ವಿಕೆಟ್‌ಗಳ ಬಳಿಗೆ ತೆರಳಿ ನಾನ್‌-ಸ್ಟ್ರೈಕರ್‌ನಲ್ಲಿದ್ದ ಬೇಲ್ಸ್‌ಗಳ ಸ್ಥಾನವನ್ನು ಅದಲು-ಬದಲು ಮಾಡಿದರು.

ವಿಕ್ರಮಾರ್ಕನಂತಿದ್ದ ಈ ತಂತ್ರ ಹೂಡಿದ ಮರು ಎಸೆತದಲ್ಲೇ ಪವಾಡ ಸಂಭವಿಸಿತು! ರವೀಂದ್ರ ಜಡೇಜಾ ಎಸೆದ ಮುಂದಿನ ಎಸೆತದಲ್ಲೇ ಶ್ರೀಲಂಕಾದ ಪ್ರಭಾತ್ ಜಯಸೂರ್ಯ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

ಸಿರಾಜ್ ಬೇಲ್ಸ್ ಬದಲಿಸಿದ ತಕ್ಷಣವೇ ವಿಕೆಟ್ ಬಿದ್ದ ಈ ಕ್ಷಣ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, "ಸಿರಾಜ್ ಮ್ಯಾಜಿಕ್ ವರ್ಕ್ ಆಯ್ತು" ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಈ ಘಟನೆಯಿಂದ ನಗೆಗಡಲಲ್ಲಿ ತೇಲಿದರು. ಈ ಸನ್ನಿವೇಶವು ಪ್ರಸ್ತುತ ಪಂದ್ಯದ ಅತಿ ದೊಡ್ಡ ಟಾಕಿಂಗ್ ಪಾಯಿಂಟ್ ಆಗಿ ಹೊರಹೊಮ್ಮಿದೆ. ಇತ್ತೀಚೆಗಿನ ವರದಿ ಬಂದಾಗ ಲಂಕಾ 8 ವಿಕೆಟ್ ಕಳೆದುಕೊಂಡು 368 ರನ್ ಗಳಿಸಿದ್ದು 155 ರನ್ ಗಳ ಮುನ್ನಡೆ ಸಾಧಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asian Games 2026: ಕೊನೆಯ ಸೆಕೆಂಡ್‌ನಲ್ಲಿ ಗೋಲ್ ಧಮಾಕ, ಪಾಕಿಸ್ತಾನಕ್ಕೆ 4-3 ಆಘಾತ ನೀಡಿ ಏಷ್ಯನ್ ಗೇಮ್ಸ್ ಹಾಕಿ ಫೈನಲ್‌ಗೆ ಭಾರತ

Asian Games 2026: ಲಂಕಾಗೆ ಭೀಕರ ಮುಖಭಂಗ: ಶನಿವಾರ ನಡೆಯಲಿದೆ ಭಾರತ, ಪಾಕಿಸ್ತಾನ ಮಹಾ ಫೈನಲ್ ಕದನ

Asian Games Semifinal: ಕಷ್ಟದ ಪಿಚ್‌ನಲ್ಲಿ ವೈಭವ್-ಇಶಾನ್ ಕಿಶನ್ ಧಮಾಕ, ಶ್ರೀಲಂಕಾ ವಿರುದ್ಧ ಭಾರತ ಸವಾಲಿನ ಮೊತ್ತ

ಶತಕದ ನಂತರದ ಸೀಕ್ರೆಟ್ ಸೆಲೆಬ್ರೇಷನ್ ಹಿಂದಿನ ರಹಸ್ಯವೇನು ಎಂದು ಕೇಳಿದ್ರೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ರೋಹಿತ್ ಶರ್ಮಾ

IND vs WI: ಅಯ್ಯೋ ಪ್ಯಾಂಟ್ ಬಿದ್ದೋಯ್ತು… ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಪ್ಯಾಂಟ್ ಬಿಚ್ಚಿ ಬಂತು

ಮುಂದಿನ ಸುದ್ದಿ
Show comments