IND v/s SA Boxing Day test:ನಮ್ಮ ಕೆಎಲ್ ರಾಹುಲ್ ಎಷ್ಟು ಕೂಲ್..ಕೂಲ್..!

Webdunia
ಬುಧವಾರ, 27 ಡಿಸೆಂಬರ್ 2023 (08:25 IST)
Photo Courtesy: Twitter
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗದ ಪಿಚ್‍ ನಲ್ಲಿ ಟೀಂ ಇಂಡಿಯಾ ಟಾಪ್ ಆರ್ಡರ್ ಕುಸಿದು ಕೂತಾಗ ಕನ್ನಡಿಗ ಬ್ಯಾಟಿಗ ಕೆಎಲ್ ರಾಹುಲ್ ಭಾರತದ ಪಾಲಿಗೆ ರಕ್ಷಕನಾಗಿದ್ದಾರೆ.

ಮೊದಲ ದಿನದಾಟದಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಭಾರತ ಈ ಗೌರವಯುತ ಮೊತ್ತ ಗಳಿಸಲು ಕಾರಣವಾಗಿದ್ದು ಕೆಎಲ್ ರಾಹುಲ್. ಇಡೀ ಭಾರತದ ಇನಿಂಗ್ಸ್ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ನಿನ್ನೆಯ ದಿನದಂತ್ಯಕ್ಕೆ ಅಜೇಯ 70 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಕೆಎಲ್ ರಾಹುಲ್ ಈ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾತ್ರವಲ್ಲ, ಎದುರಾಳಿಗಳ ಕುಹುಕ ಮಾತಿಗೂ ನಗುವಿನ ಉತ್ತರ ನೀಡುವ ಮೂಲಕ ತಾವೆಷ್ಟು ಕೂಲ್ ಎಂದು ಸಾಬೀತುಪಡಿಸಿದ್ದಾರೆ.

ಆಫ್ರಿಕಾ ಬೌಲರ್ ಗಳಿಗೆ ತಲೆನೋವಾಗಿದ್ದ ರಾಹುಲ್ ರನ್ನು ಮಾರ್ಕೊ ಜೇನ್ಸನ್ ಸ್ಲೆಡ್ಜಿಂಗ್ ಮಾಡಿ ಏಕಾಗ್ರತೆ ಕೆಡಿಸಲು ನೋಡಿದರು. ತನ್ನ ಎಸೆತದಲ್ಲಿ ರಾಹುಲ್ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದಾಗ ತಾಳ್ಮೆ ಕಳೆದುಕೊಂಡ ಜೇನ್ಸನ್ ಕೈ ಸನ್ನೆ ಮಾಡಿ ರಾಹುಲ್ ಗೆ ಬೈಯ್ದರೂ ರಾಹುಲ್ ಮಾತ್ರ ನಗುತ್ತಲೇ ಪ್ರತಿಕ್ರಿಯಿಸಿ ತಾವೆಷ್ಟು ಕೂಲ್ ಎಂದು ತೋರಿಸಿಕೊಟ್ಟರು. ಪ್ರತಿಯಾಗಿ ತಮ್ಮ ಬ್ಯಾಟ್ ನಿಂದ ಮನಮೋಹಕ ಹೊಡೆತ ಹೊಡೆಯುವ ಮೂಲಕ ಉತ್ತರ ಕೊಟ್ಟರು. ರಾಹುಲ್ ನಗುವಿಗೆ ಮನಸೋತ ಅಭಿಮಾನಿಗಳು ಈಗ ನಮ್ಮ ರಾಹುಲ್ ಎಷ್ಟು ಕೂಲ್ ಎನ್ನುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ಮುಂದಿನ ಸುದ್ದಿ
Show comments