ಲಾರ್ಡ್ಸ್: ಮಿಥಾಲಿ ರಾಜ್ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಟಗಾರ್ತಿ ಜೂಲಾನ್ ಗೋಸ್ವಾಮಿ. ಹಿರಿಯ ವೇಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯ ಜೂಲಾನ್ ಗೋಸ್ವಾಮಿ ಪಾಲಿಗೆ ಕೊನೆಯ ಏಕದಿನ ಪಂದ್ಯವಾಗಲಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಈ ಏಕದಿನ ಸರಣಿ ಭಾರತದ ಪಾಲಿಗೆ ವಿಶೇಷವಾಗಿದೆ.
ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿತ್ತು. 91 ರನ್ ಗಳಿಸಿ ಮಿಂಚಿದ ಸ್ಮೃತಿ ಮಂಧನಾ ಪಂದ್ಯದ ಬಳಿಕ ಈ ಗೆಲುವು ಜೂಲಾನ್ ಅವರಿಗೆ ಅರ್ಪಣೆ ಎಂದಿದ್ದಾರೆ. 39 ವರ್ಷದ ಜೂಲಾನ್ ಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಕೊನೆಯ ಪಂದ್ಯವಾಗಲಿದೆ.