Select Your Language

Notifications

webdunia
webdunia
webdunia
webdunia

ಕೊಲಂಬೋ ಟೆಸ್ಟ್`ನಲ್ಲಿ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ಟೀಮ್ ಇಂಡಿಯಾ

ಕೊಲಂಬೋ ಟೆಸ್ಟ್`ನಲ್ಲಿ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ಟೀಮ್ ಇಂಡಿಯಾ
ಕೊಲಂಬೋ , ಭಾನುವಾರ, 6 ಆಗಸ್ಟ್ 2017 (15:18 IST)
ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 53 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಫಾಲೋಆನ್`ಗೆ ಸಿಲುಕಿದ್ದ ಶ್ರೀಲಂಕಾ 2ನೇ ಇನ್ನಿಂಗ್ಸ್`ನಲ್ಲಿ 386 ರನ್`ಗಳಿಗೆ ಆಲೌಟ್ ಆಗುವುದರೊಂದಿಗೆ ಸೋಲೊಪ್ಪಿಕೊಂಡಿದೆ.

ಎರಡೂ ಇನ್ನಿಂಗ್ಸ್`ಗಳಲ್ಲಿ ಸಿಂಹಳೀಯರನ್ನ ಕಾಡಿದ ಅಶ್ವಿನ್ ಮತ್ತು ಜಡೇಜಾ ಜೋಡಿ ಲಂಕಾ ಬ್ಯಾಟಿಂಗ್ ಪಡೆಯನ್ನ ಕಾಡಿದರು. ಆಶ್ವಿನ್ ಎರಡೂ ಇನ್ನಿಂಗ್ಸ್`ಗಳಿಂದ 7 ವಿಕೆಟ್ ಪಡೆದರೆ ಮೊದಲ ಇನ್ನಿಂಗ್ಸ್`ನಲ್ಲಿ 2 ಮತ್ತು ದ್ವೀತಿಯ ಇನ್ನಿಂಗ್ಸ್`ನಲ್ಲಿ 5 ವಿಕೆಟ್ ಉರುಳಿಸಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಲಂಕಾ ಪರ ಕರುಣರತ್ನೆ (141) ಮತ್ತು ಮೆಂಡೀಸ್(110) ಅಮೋಘ ಶತಕ ಸಿಡಿಸಿದರೂ ತಂಡವನ್ನ ಪಾರು ಮಾಡಲು ಸಾಧ್ಯವಾಗಿಲ್ಲ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್`ನಲ್ಲಿ ಚೇತೇಶ್ವರ್ ಪೂಜಾರ(133) ಮತ್ತು ಅಜಿಂಕ್ಯ ರಹಾನೆ(132) ಅವರ ಶತಕಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 622 ರನ್`ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್`ನಲ್ಲಿ 183 ರನ್`ಗಳಿಗೆ ಆಲೌಟ್ ಆಗುವುದರೊಂದಿಗೆ ಫಾಲೋಆನ್`ಗೆ ಸಿಲುಕಿತು,

2ನೇ ಇನ್ನಿಂಗ್ಸ್`ನಲ್ಲಿ ಶ್ರೀಲಂಕಾ ಬ್ಯಾಟ್ಸ್`ಮನ್`ಗಳು ಹೋರಾಟ ನಡೆಸಿದರು. .ಲಂಕಾ ಪರ ಕರುಣರತ್ನೆ (141) ಮತ್ತು ಮೆಂಡೀಸ್(110) ಅಮೋಘ ಶತಕ ಸಿಡಿಸಿದರು. ಆದರೆ, ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ಸ್ಕೋರ್ ವಿವರ:
ಭಾರತ : 622/9
ಶ್ರೀಲಂಕಾ: 183 ಮತ್ತು 386 

Share this Story:

Follow Webdunia kannada

ಮುಂದಿನ ಸುದ್ದಿ

ರವಿಶಾಸ್ತ್ರಿ ಬೆವರಿಳಿಸಿದ ಸೌರವ್ ಗಂಗೂಲಿ