Publish Date: Wed, 15 Jun 2016 (18:16 IST)
Updated Date: Wed, 15 Jun 2016 (18:23 IST)
ಭಾರತ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಏಕ ದಿನ ಪಂದ್ಯದಲ್ಲಿ ನೋಲಾಸ್‌ನಿಂದ ಜಯಗಳಿಸುವ ಮೂಲಕ 3-0 ಯಿಂದ ಜಿಂಬಾಬ್ವೆ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ. ಭಾರತ ಜಿಂಬಾಬ್ವೆಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಎರಡನೇ ಸಾಲಿನ ಆಟಗಾರರನ್ನು ಕಳಿಸಿತ್ತು. ಆದರೂ ಜಿಂಬಾಬ್ವೆ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಮೂರು ಪಂದ್ಯಗಳನ್ನು ಸೋತು ವೈಟ್ ವಾಷ್ ಆಗಿದೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ಬುಮ್ರಾ ಅವರ ವೇಗದ ಬೌಲಿಂಗ್ ದಾಳಿಗೆ ಬಲಿಯಾಗಿ 123 ರನ್‌ಗಳಿಗೆ ಆಲೌಟ್ ಆಗಿತ್ತು. ಬುಮ್ರಾ, ಚಿಗುಂಬರಾ, ಚಿಬಾಬಾ ಮುಂತಾದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಚಹಲ್ 2 ವಿಕೆಟ್ ಕಬಳಿಸಿದರು.
ಬಳಿಕ ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಲೋಕೇಶ್ ರಾಹುಲ್ 70 ಎಸೆತಗಳಲ್ಲಿ 63 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಚೊಚ್ಚಲ ಪ್ರವೇಶ ಮಾಡಿರುವ ಫೈಜ್ ಫಜಲ್ 61 ಎಸೆತಗಳಲ್ಲಿ 55 ರನ್ ಮಾಡಿ ಅಜೇಯರಾಗಿ ಉಳಿದರು. ಭಾರತ ಕೇವಲ 21. 5 ಓವರುಗಳಲ್ಲಿ ಜಿಂಬಾಬ್ವೆ ಗಡಿಯನ್ನು ನೋಲಾಸ್‌ಗೆ ದಾಟುವ ಮೂಲಕ ಮೂರು ಪಂದ್ಯಗಳಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
guna
Publish Date: Wed, 15 Jun 2016 (18:16 IST)
Updated Date: Wed, 15 Jun 2016 (18:23 IST)