Select Your Language

Notifications

webdunia
webdunia
webdunia
webdunia

ಭಾರತ-ವೆಸ್ಟ್ ಇಂಡೀಸ್ ನಾಲ್ಕನೇ ಟಿ20 ಇಂದು: ಟೀಂ ಇಂಡಿಯಾಕ್ಕೆ ಗೆಲುವಿನ ಒತ್ತಡ

ಟೀಂ ಇಂಡಿಯಾ
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಗೆಲುವಿನ ಒತ್ತಡದಲ್ಲಿದೆ.

ಸರಣಿಯಲ್ಲಿ ಟೀಂ ಇಂಡಿಯಾ 1-2 ಅಂತರದಿಂದ ಹಿನ್ನಡೆಯಲ್ಲಿದೆ. ಒಂದೇ ಒಂದು ಪಂದ್ಯ ಸೋತರೂ ಸರಣಿ ಕಳೆದುಕೊಳ್ಳಲಿದೆ. ಅತ್ತ ವಿಂಡೀಸ್ ಗೆ ಸರಣಿ ಗೆಲ್ಲಲು ಒಂದು ಪಂದ್ಯದಲ್ಲಿ ಗೆಲುವು ಸಾಕು.

ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರು ವೈಫಲ್ಯ ಅನುಭವಿಸಿದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಾಧಾನಕರವಾಗಿತ್ತು. ಜೊತೆಗೆ ಸ್ಪಿನ್ನರ್ ಗಳೇ ಟೀಂ ಇಂಡಿಯಾದ ಪ್ರಮುಖ ಶಕ್ತಿಯಾಗಿದ್ದಾರೆ. ಭಾರತ ಗೆಲ್ಲಬೇಕಾದರೆ ಮತ್ತೊಮ್ಮೆ ನಿಕಲಸ್ ಪೂರನ್, ರೊವ್ ಮ್ಯಾನ್ ಪೊವೆಲ್ ಗೆ ಕಡಿವಾಣ ಹಾಕಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ನಡೆಯುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೌಂಟಿ ಕ್ರಿಕೆಟ್ ನಲ್ಲಿ ಅಬ್ಬರಿಸಿದ ಪೃಥ್ವಿ ಶಾ: ಏಕದಿನ ಮಾದರಿಯಲ್ಲಿ ದಾಖಲೆಯ ದ್ವಿಶತಕ