Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ 2ನೇ ಟೆಸ್ಟ್ : ಗಾಯಗೊಂಡ ಮುರಳಿ ವಿಜಯ್ ಬದಲಿಗೆ ಕೆ.ಎಲ್. ರಾಹುಲ್

ಭಾರತ-ವಿಂಡೀಸ್ 2ನೇ ಟೆಸ್ಟ್ : ಗಾಯಗೊಂಡ ಮುರಳಿ ವಿಜಯ್ ಬದಲಿಗೆ ಕೆ.ಎಲ್. ರಾಹುಲ್
ಕಿಂಗ್‌ಸ್ಟನ್ , ಶನಿವಾರ, 30 ಜುಲೈ 2016 (11:15 IST)
ವಿರಾಟ್ ಕೊಹ್ಲಿ ಟೆಸ್ಟ್ ನಾಯಕರಾದ ಮೇಲೆ ಶ್ರೀಲಂಕಾ ವಿರುದ್ಧ 2-1ರಿಂದ ಜಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ 3-0 ಯಿಂದ ಸರಣಿ ಜಯದೊಂದಿಗೆ ತಮ್ಮ ಉತ್ತಮ ಫಾರಂ ಅನ್ನು ವೆಸ್ಟ್ಇಂಡೀಸ್‌ಗೆ ಒಯ್ದು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ. ಜಮೈಕಾ ಟೆಸ್ಟ್‌ಗೆ ತೆರಳುತ್ತಿರುವ ಕೊಹ್ಲಿ ಇನ್ನೊಂದು ದಾಖಲೆಯ ಗುರಿಯನ್ನು ಹೊಂದಿದ್ದಾರೆ.

1986ರಿಂದೀಚೆಗೆ ಉಪಖಂಡದ ಹೊರಗೆ 2ಕ್ಕಿಂತ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದಿಲ್ಲ. ವೆಸ್ಟ್ ಇಂಡೀಸ್ ಕಳಪೆ ಫಾರಂ ಹೊಂದಿರುವ ನಡುವೆ ಸಬೀನಾ ಪಾರ್ಕ್‌ಗೆ ತೆರಳುತ್ತಿರುವ ಭಾರತ  2-0ಯಿಂದ ಪಂದ್ಯಗೆಲ್ಲುವ ಫೇವರಿಟ್ ಆಗಿದೆ. ಆದಾಗ್ಯೂ ಅವರು ಸ್ವಲ್ಪ ತೇವದ ಹವಾಮಾನ ಎದುರಿಸಬೇಕಿದ್ದು, ಐದು ದಿನಗಳ ಪೈಕಿ ನಾಲ್ಕು ದಿನಗಳು ಮಳೆಯ ಮುನ್ಸೂಚನೆ ನೀಡಲಾಗಿದೆ.
 
ಏತನ್ಮಧ್ಯೆ ಭಾರತದ ಓಪನರ್ ಮುರಳಿ ವಿಜಯ್ ಅವರನ್ನು ಹೆಬ್ಬೆಟ್ಟು ಗಾಯದ ಹಿನ್ನೆಲೆಯಲ್ಲಿ ಎರಡನೇ ಟೆಸ್ಟ್‌ನಿಂದ ಕೈಬಿಡಲಾಗಿದ್ದು, ಬ್ಯಾಕ್ ಅಪ್ ಓಪನರ್ ಕೆ.ಎಲ್. ರಾಹುಲ್ ಅವರು ವಿಜಯ್‌ಗೆ ಬದಲಿಯಾಗಿ ಆಡಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಮುರಳಿ ವಿಜಯ್ ವಿಫಲಗೊಂಡಿದ್ದು ಬಿಟ್ಟರೆ ಉಳಿದವರು ಮನೋಜ್ಞ ಪ್ರದರ್ಶನ ನೀಡಿದ್ದರು. ಕೊಹ್ಲಿ ಅವರ ಚೊಚ್ಚಲ ದ್ವಿಶತಕ, ಅಶ್ವಿನ್ ಆಲ್‌ರೌಂಡ್ ಪ್ರದರ್ಶನ ಮತ್ತು ಶಿಖರ್ ಧವನ್ ಅವರ ದೃಢವಾದ 84 ರನ್ ಹಾಗೂ ಉಮೇಶ್ ಯಾದವ್ ಮತ್ತು ಶಮಿ ಅವರ ತಲಾ ನಾಲ್ಕು ವಿಕೆಟ್‌ ಕಬಳಿಕೆಯಿಂದ ಭಾರತಕ್ಕೆ ಅನುಕೂಲವಾಗಿತ್ತು.
 
 ವೆಸ್ಟ್ ಇಂಡೀಸ್ ತಂಡವು ಆಂಟಿಗಾದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ವಿಫಲವಾಗಿದೆ. ಸ್ಯಾಮ್ಯುಯಲ್ಸ್ ಅವರನ್ನು ಹೊರತುಪಡಿಸಿ, ಯಾವ ಬ್ಯಾಟ್ಸ್‌ಮನ್ ಕೂಡ ಕೊಡುಗೆ ನೀಡಿಲ್ಲ. ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್‌ರನ್ನು ಸೇರಿಸಿಕೊಳ್ಳುವ ಮೂಲಕ ವೇಗದ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಭಾರತ ನಾಲ್ವರು ಪೇಸ್ ಬೌಲರುಗಳನ್ನು ಆಡಿಸುವಂತೆ ಕಾಣುತ್ತಿದ್ದು, ಸ್ಟುವರ್ಟ್ ಬಿನ್ನಿ ಮೀಡಿಯಂ ಪೇಸ್ ಬೌಲಿಂಗ್ ಜತೆಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡಬಲ್ಲರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೆಕ್ಸಿಕೊ ಹೊಟೆಲ್‌ನಲ್ಲಿ ಅರ್ಜಂಟೈನಾ ಒಲಿಂಪಿಕ್ ಫುಟ್ಬಾಲ್ ತಂಡದ ದರೋಡೆ