Select Your Language

Notifications

webdunia
webdunia
webdunia
webdunia

ಸೇಂಟ್ ಲೂಸಿಯಾದಲ್ಲಿ ವಿಂಡೀಸ್‌ ವಿರುದ್ಧ ಜಯಕ್ಕಾಗಿ ಕಾದಿರುವ ಭಾರತ

ಸೇಂಟ್ ಲೂಸಿಯಾದಲ್ಲಿ ವಿಂಡೀಸ್‌ ವಿರುದ್ಧ ಜಯಕ್ಕಾಗಿ ಕಾದಿರುವ ಭಾರತ
ಜಮೈಕಾ , ಮಂಗಳವಾರ, 9 ಆಗಸ್ಟ್ 2016 (11:14 IST)
ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ  ವೆಸ್ಟ್ ಇಂಡೀಸ್ ತಂಡವು ಹತಾಶ ಸ್ಥಿತಿಯಲ್ಲಿದ್ದು ಫೈಟ್‌ಬ್ಯಾಕ್ ಮಾಡಬೇಕಾಗಿದೆ. ಜಮೈಕಾದಲ್ಲಿ ಇಂದು ನಡೆಯುವ ಟೆಸ್ಟ್ ಪಂದ್ಯದಲ್ಲಿ  ಭಾರತ ಇನ್ನೊಂದು ಭರ್ಜರಿ ಜಯದ ನಿರೀಕ್ಷೆಯಲ್ಲಿದೆ. ರೋಸ್ಟನ್ ಚೇಸ್ ಸಾರಥ್ಯದ ಹೋರಾಟವು ಹಿಂದಿನ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಸೋಲಿನಿಂದ ಪಾರು ಮಾಡಿ ಸರಣಿಯನ್ನು ಜೀವಂತವಿರಿಸಿದೆ.

ಇಂದಿನಿಂದ ಆರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ತಾವು ವಿಶೇಷವಾದ್ದನ್ನು ಸಾಧಿಸಬಹುದೆಂಬ ನಂಬಿಕೆಯಿಂದ ವೆಸ್ಟ್ ಇಂಡೀಸ್ ಮೈದಾನಕ್ಕೆ ಇಳಿಯಲಿದೆ. ಭಾರತ ಪ್ರಬಲ ಫೇವರಿಟ್‌ಗಳಾಗಿ ತೆರಳಿದ್ದರೂ ಆರಂಭಿಕ ಟೆಸ್ಟ್‌ನಲ್ಲಿ ಆಡಿದ ರೀತಿಯಲ್ಲಿ ವೆಸ್ಟ್ ಇಂಡೀಸ್ ಸುಲಭವಾಗಿ ಮಣಿಯುವುದಿಲ್ಲ ಎನ್ನುವುದು ಅದಕ್ಕೆ ಗೊತ್ತಿದೆ.
 
ಭಾರತ 1-0ಯಿಂದ ಮುನ್ನಡೆ ಸಾಧಿಸಿದ್ದು, ಇನ್ನೂ 2 ಪಂದ್ಯಗಳು ಬಾಕಿವುಳಿದಿದ್ದು, ಸೇಂಟ್ ಲೂಸಿಯಾ ಟೆಸ್ಟ್ ಅತ್ಯಂತ ಗಮನಾರ್ಹವಾಗಿದೆ. ಭಾರತಕ್ಕೆ ಜಯವು ಪ್ರವಾಸಿಗಳಿಗೆ ಸರಣಿಯ ಜಯ ತಂದುಕೊಡುತ್ತದೆ ಮತ್ತು ಸ್ವದೇಶಿ ತಂಡಕ್ಕೆ ಜಯವು ಅಂತಿಮ ಟೆಸ್ಟ್‌ನಲ್ಲಿ ಸರಣಿ ಜಯಕ್ಕಾಗಿ ಅದಕ್ಕೆ ಉತ್ತೇಜಿಸುತ್ತದೆ.
 
ಭಾರತದ ಎಲ್ಲಾ ವಿಭಾಗಗಳು ಅವು ಬಯಸಿದಂತೆ ಕಾರ್ಯನಿರ್ವಹಿಸುತ್ತಿದ್ದು, ಚೆನ್ನಾಗಿ ತೈಲ ತುಂಬಿದ ಯಂತ್ರದಂತಿದೆ. ಯಾವ ಬ್ಯಾಟ್ಸ್‌ಮನ್ ಕೂಡ ಫಾರಂಗಾಗಿ ತಿಣುಕಾಡದೇ, ಬೌಲರ್‌ಗಳು ಜಮೈಕಾದಲ್ಲಿ 5ನೇ ದಿನ ತಿಣುಕಾಡಿದರೂ, ಬಹುತೇಕ ವೇಳೆಯಲ್ಲಿ ಟಾಪ್‌ನಲ್ಲಿದ್ದರು. ರವೀಂದ್ರ ಜಡೇಜಾ ಎರಡೂ ಟೆಸ್ಟ್‌ಗಳಲ್ಲಿ ಬೆಂಚ್ ಕಾಯಿಸಿದ್ದು, ವಿರಾಟ್ ಕೊಹ್ಲಿ ಹೆಚ್ಚುವರಿ ಸ್ಪಿನ್ನರ್ ಬೇಕೆಂದು ನಿರ್ಧರಿಸಿದರೆ ಜಡೇಜಾ ಆಯ್ಕೆಯಾಗುತ್ತಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊ ಒಲಿಂಪಿಕ್ಸ್: ಶೂಟರ್ ಅಭಿನವ್ ಭಿಂದ್ರಾ, ಪುರುಷರ ಹಾಕಿ ತಂಡಕ್ಕೆ ನಿರಾಶೆ