Publish Date: Sun, 16 Jun 2019 (09:08 IST)
Updated Date: Sun, 16 Jun 2019 (09:10 IST)
ಲಂಡನ್: ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದು ವಿಶ್ವಕಪ್ ಪಂದ್ಯ ನಡೆಯಲಿದ್ದು, ಪ್ರಮುಖ ಆಟಗಾರರ ನಡುವಿನ ಜುಗಲ್ ಬಂದಿಯಾಗುವ ಲಕ್ಷಣ ತೋರುತ್ತಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರಿಗೆ ಕೆಲವೊಂದು ಆಟಗಾರರೇ ಟಾರ್ಗೆಟ್ ಆಗಿರುತ್ತಾರೆ. ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ-ಮೊಹಮ್ಮದ್ ಅಮೀರ್, ರೋಹಿತ್ ಶರ್ಮಾ-ವಹಾಬ್ ರಿಯಾಜ್, ಜಸ್ಪ್ರೀತ್ ಬುಮ್ರಾ-ಫಖರ್ ಜಮಾನ್ ಪರಸ್ಪರರನ್ನು ಟಾರ್ಗೆಟ್ ಮಾಡಿಯೇ ಕದನ ಕಣಕ್ಕಿಳಿಯುತ್ತಾರೆ.
ಹೀಗಾಗಿ ಈ ಆಟಗಾರರ ನಡುವಿನ ಕಾಳಗ ನೋಡಲು ಕುತೂಹಲಕಾರಿಯಾಗಿರುತ್ತದೆ. ಈಗಾಗಲೇ ಕ್ರಿಕೆಟ್ ದಿಗ್ಗಜ ಸಚಿನ್ ಕೂಡಾ ರೋಹಿತ್ ಮತ್ತು ಕೊಹ್ಲಿಯೇ ಪಾಕ್ ಆಟಗಾರರ ಟಾರ್ಗೆಟ್ ಆಗಿರಬಹುದು ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, 60 ಸಾವಿರ ರೂ.ವರೆಗೂ ಟಿಕೆಟ್ ಬಿಕರಿಯಾಗಿದೆ ಎನ್ನಲಾಗಿದೆ.