Webdunia - Bharat's app for daily news and videos

Install App

ಭಾರತ-ನ್ಯೂಜಿಲೆಂಡ್ ಟಿ20 ಸರಣಿ ಇಂದಿನಿಂದ: ಹಾರ್ದಿಕ್ ಪಾಂಡ್ಯ ನಾಯಕ

Webdunia
ಶುಕ್ರವಾರ, 27 ಜನವರಿ 2023 (09:10 IST)
Photo Courtesy: Twitter
ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಏಕದಿನ ಸರಣಿ ಬಳಿಕ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗುತ್ತಿದೆ.

ಮೊದಲ ಪಂದ್ಯ ಧೋನಿ ತವರು ರಾಂಚಿಯಲ್ಲಿ ನಡೆಯುತ್ತಿದೆ. ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಂ ಇಂಡಿಯಾ ಈಗ ಟಿ20 ಸರಣಿಯಲ್ಲಿ ಯುವ ಪಡೆಯನ್ನು ಪರೀಕ್ಷೆಗೊಳಪಡಿಸಲಿದೆ.

ಇತ್ತೀಚೆಗಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ಪಡೆ ಟಿ20 ಕ್ರಿಕೆಟ್ ನಲ್ಲಿ ಸತತ ಗೆಲುವನ್ನು ಕಾಣುತ್ತಲೇ ಬಂದಿದೆ. ಈ ಬಾರಿ ತವರಿನಲ್ಲೇ ಸರಣಿ ನಡೆಯುತ್ತಿರುವುದರಿಂದ ಗೆಲುವು ಕಷ್ಟವೇನಲ್ಲ. ಬಹಳ ದಿನಗಳ ನಂತರ ಪೃಥ್ವಿ ಶಾ ತಂಡದಲ್ಲಿ ಸ್ಥಾನ ಪಡೆದಿದ್ದು, ಫಾರ್ಮ್ ನಲ್ಲೂ ಇರುವುದರಿಂದ ಆಡುವ ಅವಕಾಶ ಪಡೆಯಬಹುದು. ಅವರ ಜೊತೆಗೆ ಇಶಾನ್ ಕಿಶನ್ ಅಥವಾ ಋತುರಾಜ್ ಗಾಯಕ್ ವಾಡ್ ಓಪನಿಂಗ್ ಮಾಡಬಹುದು. ಮಧ್ಯಮ ಕ್ರಮಾಂಕಕ್ಕೆ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಬಲ.

ಬೌಲಿಂಗ್ ವಿಭಾಗದಲ್ಲಿ ಅರ್ಷ್‍ ದೀಪ್ ಸಿಂಗ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದು, ಅವರಿಗೆ ಯುವ ವೇಗಿ ಉಮ್ರಾನ್ ಮಲಿಕ್ ಸಾಥ್ ನೀಡಬಹುದು. ಸ್ಪಿನ್ನರ್ ಗಳ ಪೈಕಿ ಕುಲದೀಪ್ ಯಾದವ್ ಅತ್ಯುತ್ತಮ ಫಾರ್ಮ್ ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಗೆ ಸ್ವಿಂಗ್ ಆಡುವ ಯೋಗ್ಯತೆ ಇಲ್ಲ ಎಂದ ಹ್ಯಾರಿ ಬ್ರೂಕ್ ಗೆ ಕೆಎಲ್ ರಾಹುಲ್ ಉತ್ತರ ಏನಿತ್ತು ಗೊತ್ತಾ

Video: ಡ್ರಾ ಮಾಡಿಕೊಳ್ಳೋಣ್ವಾ ಎಂದರೆ ತಡಿ ಸೆಂಚುರಿ ಮಾಡ್ತೀನಿ ಎಂದ ರವೀಂದ್ರ ಜಡೇಜಾ

ಕಾಲಿನ ಬೆರಳು ಮುರಿದರೂ ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ರಿಷಭ್‌ ಪಂತ್‌: ಕುತೂಹಲ ಘಟ್ಟದತ್ತ ನಾಲ್ಕನೇ ಟೆಸ್ಟ್‌

IND vs ENG: ಕೆಎಲ್ ರಾಹುಲ್ ಟೀಂ ಇಂಡಿಯಾಗೆ ನೀವೇ ಗತಿ

IND vs ENG: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ಇದೆಂಥಾ ಅವಸ್ಥೆ

ಮುಂದಿನ ಸುದ್ದಿ
Show comments