Publish Date: Sun, 02 Feb 2020 (08:53 IST)
Updated Date: Sun, 02 Feb 2020 (08:54 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಐದನೇ ಮತ್ತು ಅಂತಿಮ ಟಿ20 ಪಂದ್ಯ ಇಂದು ನಡೆಯಲಿದೆ. ಕಳೆದ ಎರಡು ಪಂದ್ಯಗಳಲ್ಲಿ ಸೂಪರ್ ಓವರ್ ನಿಂದಾಗಿ ಪ್ರೇಕ್ಷಕರಲ್ಲಿ ಥ್ರಿಲ್ ಮೂಡಿಸಿತ್ತು.
ಈ ಪಂದ್ಯದಲ್ಲೂ ಮತ್ತೊಂದು ರೋಚಕ ಕ್ಷಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ ಈ ಪಂದ್ಯ ಫಲಿತಾಂಶ ಭಾರತದ ಪಾಲಿಗೆ ಪ್ರಮುಖವಲ್ಲ. ಹಾಗಿದ್ದರೂ ನ್ಯೂಜಿಲೆಂಡ್ ಗೆ ಪ್ರತಿಷ್ಠೆ ಉಳಿಸಿಕೊಳ್ಳಲು ಇಂದು ಗೆಲುವು ನಿರ್ಣಾಯಕವಾಗಲಿದೆ.
ಭಾರತ ಮತ್ತೆ ಪ್ರಯೋಗಕ್ಕೆ ಮಣೆ ಹಾಕುವ ಸಾಧ‍್ಯತೆ ನಿಚ್ಚಳವಾಗಿದೆ. ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿ ರೋಹಿತ್ ಗೆ ವಿಶ್ರಾಂತಿ ನೀಡಲಾಗಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಗೆ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಇಂದಿನ ಪಂದ್ಯದಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದೆ.