Select Your Language

Notifications

webdunia
webdunia
webdunia
webdunia

ಭಾರತಕ್ಕೆ ಸೋಲಿನ ರುಚಿ ತೋರಿಸಿದ ಕೆರಿಬಿಯನ್ನರು.. ಮುಳುವಾಯ್ತು ಧೋನಿಯ ಆಮೆಗತಿ ಬ್ಯಾಟಿಂಗ್

ಭಾರತಕ್ಕೆ ಸೋಲಿನ ರುಚಿ ತೋರಿಸಿದ ಕೆರಿಬಿಯನ್ನರು.. ಮುಳುವಾಯ್ತು ಧೋನಿಯ ಆಮೆಗತಿ ಬ್ಯಾಟಿಂಗ್
ನಾರ್ತ್ ಸೌಂಡ್ , ಸೋಮವಾರ, 3 ಜುಲೈ 2017 (07:40 IST)
ನಾರ್ತ್ ಸೌಂಡ್`ನಲ್ಲಿ 4ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಸೋಲಿನ ರುಚಿ ತೋರಿಸಿದೆ. ವಿಂಡೀಸ್ ನೀಡಿದ 190 ರನ್`ಗಳ ಗುರಿ ತಲುಪಲಾಗದೇ ಭಾರತ ತಂಡ 178 ರನ್`ಗಳಿಗೆ ಆಲೌಟ್ ಆಗುವ ಮೂಲಕ 11 ರನ್`ಗಳ ಸೋಲನುಭವಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 50 ಓವರ್`ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತು. ಸ್ಲೋ ಪಿಚ್`ನಲ್ಲಿ ಪರದಾಡಿದ ಕೆರಿಬಿಯನ್ನರು ಪ್ರಯಾಸದ ಬ್ಯಾಟಿಂಗ್ ನಡೆಸಿದರು. ಆದರೆ, 190 ರನ್`ಗಳ ಗುರಿ ಬೆನ್ನತ್ತಿದ ಭಾರತ ತಂಡ 178 ರನ್`ಗಳಿಗೆ ಆಲೌಟ್ ಆಯಿತು.

ಅಜಿಂಕ್ಯ ರಹಾನೆ 60 ರನ್ ಗಳಿಸಿದ್ದು, ಬಿಟ್ಟರೆ ಟಾಪ್ ಆರ್ಡರ್`ಗಳಾದ ಶಿಖರ್ ಧವನ್(06), ವಿರಾಟ್ ಕೊಹ್ಲಿ (03), ದಿನೇಶ್ ಕಾರ್ತಿಕ್ (02) ವಿಫಲವಾಗಿದ್ದು, ಭಾರತಕ್ಕೆ ಮುಳುವಾಯ್ತು. ಅದರಲ್ಲೂ ಮಹೇಂದ್ರ ಸಿಂಗ್ ಧೋನಿಯ ಆಮೆಗತಿಯ ಬ್ಯಾಟಿಂಗ್ ಕಡಿಮೆ ಮೊತ್ತದ ಚೇಸಿಂಗ್`ನಲ್ಲಿ ಮುಳುವಾಯಿತು. ಟೆಸ್ಟ್`ನಂತೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಧೋನಿ 114 ಎಸೆತಗಳನ್ನ ಎದುರಿಸಿ 54 ರನ್ ಗಳಿಸಿ ಔಟಾದರು. ಬಳಿಕ ಬಂದ ಪಾಂಡ್ಯಾ, ಜಾಧವ್ ಹೋರಾಟ ನಡೆಸಿದರಾದರೂ ಪಂದ್ಯ ಗೆಲ್ಲಲಾಗಲಿಲ್ಲ. 49.4 ಓವರ್`ಗಳಿಗೆ ಭಾರತ ತಂಡ 178 ರನ್ ಗಳಿಸಿ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಮಾರಕ ದಾಳಿ ನಡೆಸಿದ ಜೇಸನ್ ಹೋಲ್ಡರ್ 5 ವಿಕೆಟ್ ಉರುಳಿಸಿದರು. 

5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0ಯಿಂದ ಮುಂದಿದೆ. ಕೊನೆಯ ಪಂದ್ಯ ಗೆದ್ದರೆ ಸರಣಿ ಭಾರತದ ಕೈವಶವಾಗಲಿದೆ. ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸಮ ಬಲ ಸಾಧಿಸಲು ಶತಾಯಗತಾಯ ಹೋರಾಟ ನಡೆಸಲಿದೆ. ರೋಚಕತೆ ಕಳೆದುಕೊಂಡಿದ್ದ ಈ ಸರಣಿಗೆ ಕೊನೆಯ ಪಂದ್ಯ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ವಿದೇಶದಲ್ಲಿ ಮೊದಲ ಸರಣಿ ಗೆಲುವಿನ ತವಕ