ಪೋರ್ಟ್ ಆಫ್ ಸ್ಪೇನ್: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಾಲ್ಕನೇ ಏಕದಿನ ಪಂದ್ಯ ನಡೆಯಲಿದೆ. ಇಂದು ಟೀಂ ಇಂಡಿಯಾ ಗೆದ್ದರೆ ಸರಣಿ ಕೈವಶವಾಗಲಿದೆ.
ವಿಶೇಷವೆಂದರೆ ವಿರಾಟ್ ಕೊಹ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಏಕದಿನ ಸರಣಿಯ ನೇತೃತ್ವ ವಹಿಸಿದ್ದಾರೆ. ಹಾಗಾಗಿ ಈ ಸರಣಿ ಗೆಲುವು ಅವರ ಪಾಲಿಗೆ ವಿಶೇಷವಾಗಲಿದೆ. ಅಲ್ಲದೆ, ಅನಿಲ್ ಕುಂಬ್ಳೆಯೊಂದಿಗೆ ವಿವಾದ ಮಾಡಿಕೊಂಡ ನಂತರ ಮೊದಲ ಸರಣಿ ಇದಾಗಿದ್ದು, ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.
ಭಾರತ ತಂಡಕ್ಕೆ ಇದುವರೆಗೆ ವೆಸ್ಟ್ ಇಂಡೀಸ್ ಯಾವುದೇ ರೀತಿಯಲ್ಲೂ ಸವಾಲೊಡ್ಡಲಿಲ್ಲ. ಕಳೆದ ಪಂದ್ಯದಲ್ಲಿ ಭಾರತದ ನೀರಸ ಬ್ಯಾಟಿಂಗ್ ಹೊರತಾಗಿಯೂ ಬೌಲರ್ ಗಳು ಅದನ್ನು ಸರಿದೂಗಿಸಿ ಭರ್ಜರಿ ಗೆಲುವು ದಾಖಲಿಸಿಕೊಟ್ಟಿದ್ದರು. ಹೀಗಾಗಿ ಭಾರತಕ್ಕೆ ವಿಂಡೀಸ್ ಸವಾಲೆನಿಸಿಲ್ಲ.
ಮಳೆಯೊಂದು ಅಡ್ಡಿಯಾಗದಿದ್ದರೆ ಇಂದು ಮತ್ತೆ ಭಾರತ ಪಾರಮ್ಯ ಮೆರೆಯುವುದು ಖಂಡಿತಾ. ಈ ಪಂದ್ಯ ಗೆದ್ದರೆ ಮುಂದಿನ ಪಂದ್ಯ ಔಪಚಾರಿಕವೆನಿಸಲಿದ್ದು, ಟೀಂ ಇಂಡಿಯಾಗೆ ತನ್ನ ಬೆಂಚ್ ಬಲದ ಸಾಮರ್ಥ್ಯ ಪರೀಕ್ಷಿಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ