Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: ಜಾರ್ವೋಗೆ ಜೀವನಪರ್ಯಂತ ನಿಷೇಧ

webdunia
ಭಾನುವಾರ, 29 ಆಗಸ್ಟ್ 2021 (09:04 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಾರ್ವೋ ಎಂಬ ಅಭಿಮಾನಿಯೊಬ್ಬ ಭಾರತೀಯ ಕ್ರಿಕೆಟಿಗರಂತೆ ಜೆರ್ಸಿ ತೊಟ್ಟು, ಬ್ಯಾಟ್, ಪ್ಯಾಡ್ ತೊಟ್ಟುಕೊಂಡು ಪಿಚ್ ಗೇ ನುಗ್ಗಿದ ಘಟನೆ ನಡೆಯಿತು.


Photo Credit: Google
ರೋಹಿತ್ ಶರ್ಮಾ ಔಟಾದ ಬಳಿಕ ವಿರಾಟ್ ಕೊಹ್ಲಿ ಮೈದಾನಕ್ಕೆ ಬರಬೇಕಿತ್ತು. ಅವರು ಬರುವ ಮೊದಲೇ ಜಾರ್ವೋ ಎಂಬಾತ ಭಾರತೀಯ ದಿರಿಸು ತೊಟ್ಟು ನೇರವಾಗಿ ಪಿಚ್ ಗೆ ಬಂದು ಗಾರ್ಡ್ ತೆಗೆದುಕೊಂಡಿದ್ದ.

ತಕ್ಷಣವೇ ಭದ್ರತಾ ಸಿಬ್ಬಂದಿಗಳು ಓಡಿ ಬಂದು ಆತನನ್ನು ಹಿಡಿದು ಮೈದಾನದಿಂದ ಹೊರದಬ್ಬಿದ್ದಾರೆ. ಇಷ್ಟಕ್ಕೇ ಇದು ಮುಗಿದಿಲ್ಲ. ಬಳಿಕ ಸಾಮಾಜಿಕ ಜಾಲತಾಣದಲ್ಲೂ ನಾನು ಭಾರತ ಪರವಾಗಿ ಬ್ಯಾಟ್ ಮಾಡಬೇಕೆಂದು ವಿಡಿಯೋ ಹಾಕಿಕೊಂಡಿದ್ದಾನೆ. ಇದೀಗ ಈತನಿಗೆ ಜೀವನ ಪರ್ಯಂತ ಹೆಡ್ಡಿಂಗ್ಲೇ ಮೈದಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಹಿಂದೆಯೂ ಈತ ಇಂತಹ ಕೃತ್ಯವೆಸಗಿದ್ದ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಅಪರೂಪದ ದಾಖಲೆ ಮಾಡಿದ ರವೀಂದ್ರ ಜಡೇಜಾ