Select Your Language

Notifications

webdunia
webdunia
webdunia
webdunia

ಭಾರತ ಬಾಂಗ್ಲಾದೇಶ ಏಕೈಕ ಟೆಸ್ಟ್ ಪಂದ್ಯ ಮುಂದೂಡಿಕೆ

ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಬೇಕಿದ್ದ ಏಕೈಕ ಟೆಸ್ಟ್ ಪಂದ್ಯ ಮುಂದೂಡಿಕೆಯಾಗಿದೆ. ಅದು ಫೆಬ್ರವರಿ 9 ಕ್ಕೆ ಮುಂದೂಡಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ನಿಗದಿಯಂತೆ ಇದು ಫೆಬ್ರವರಿ 8 ಕ್ಕೆ ನಡೆಯಬೇಕಿತ್ತು. ಒಂದು ದಿನ ತಡವಾಗಿ ಆರಂಭಿಸುವುದು ಎಲ್ಲಾ ದೃಷ್ಟಿಯಿಂದ ಉತ್ತಮ. ನಮಗೆ ಹೆಚ್ಚಿನ ವೀಕ್ಷಕಕರೂ ಸಿಗಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ ನಿಜ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.

ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದ ಬಳಿಕ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಭಾರತದಲ್ಲಿ ಸರಣಿ ಆಡಲು ಬರುತ್ತಿದೆ. ಸದ್ಯ ಆ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ರಣಜಿ ಟ್ರೋಫಿಗೆ ನೂತನ ಒಡೆಯ!