ಇಂಧೋರ್: ಕೊನೆಗೂ ಗುಜರಾತ್ ಅಂದುಕೊಂಡಿದ್ದನ್ನು ಸಾಧಿಸಿದೆ. ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ರಣಜಿ ಕ್ರಿಕೆಟ್ ಕಿರೀಟ ಮುಡಿಗೇರಿಸಿಕೊಂಡಿದೆ.
ನಾಯಕನ ಆಟವಾಡಿದ ಪಾರ್ಥಿವ್ ಪಟೇಲ್ 143 ರನ್ ಗಳಿಸಿ ಮನ್ ಪ್ರೀತ್ ಜುನೇಜಾ ಜತೆ ತಂಡವನ್ನು ದಡ ಮುಟ್ಟಿಸಲು ಸಹಾಯ ಮಾಡಿದರು. ಇದರೊಂದಿಗೆ ಕಳೆದ 26 ವರ್ಷಗಳಿಂದ ಇದೇ ಮೊದಲ ಬಾರಿಗೆ ಫೈನಲ್ ತಲುಪಿಯೂ ರಣಜಿ ಗೆಲ್ಲಲು ಮುಂಬೈ ವಿಫಲವಾಯಿತು. ಇದರೊಂದಿಗೆ ಗುಜರಾತ್ ರಣಜಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಕೊನೆಯ ಎಸೆತದಲ್ಲಿ ಎಸ್ ಎನ್ ಠಾಕೂರ್ ಬೌಂಡರಿ ಗಳಿಸುವುದರೊಂದಿಗೆ ಅಧಿಕಾರಯುತವಾಗಿ ಗೆಲುವ ತಮ್ಮದಾಗಿಸಿಕೊಂಡರು. ಇಂದು ಇಡೀ ದಿನ ಎಚ್ಚರಿಕೆಯ ಆಟವಾಡಿದ ಗುಜರಾತ್ ವಿನಾಕಾರಣ ತಪ್ಪಾಗದಂತೆ ನೋಡಿಕೊಂಡಿತು. ಇಂದಿನ ದಿನ ಗುಜರಾತ್ ಕೇವಲ 3 ವಿಕೆಟ್ ಕಳೆದುಕೊಂಡಿತು.
ಎಲ್ಲದಕ್ಕೂ ಯುವ ಮತ್ತು ಆಕ್ರಮಣಕಾರಿ ತಂಡವೇ ಕಾರಣ ಎಂದು ಪಂದ್ಯದ ನಂತರ ನಾಯಕ ಪಾರ್ಥಿವ್ ಪಟೇಲ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ