Publish Date: Sun, 24 Feb 2019 (08:46 IST)
Updated Date: Sun, 24 Feb 2019 (08:48 IST)
ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಕಠಿಣ ತಾಲೀಮು ನಡೆಸಿವೆ.
ತಮ್ಮ ತವರಿನಲ್ಲೇ ಟೀಂ ಇಂಡಿಯಾ ನೀಡಿದ ಸೋಲಿಗೆ ಆಸೀಸ್ ಗೆ ಸೇಡು ತೀರಿಸಿಕೊಳ್ಳುವ ತವಕ. ಆದರೆ ಭಾರತೀಯರೂ ವಿಶ್ವಕಪ್ ಗೆ ಮೊದಲು ಭರ್ಜರಿ ಗೆಲುವಿನೊಂದಿಗೆ ತಯಾರಾಗಲು ಸಜ್ಜಾಗಿದ್ದಾರೆ.
ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ನಿನ್ನೆಯಿಡೀ ಕಠಿಣ ತಾಲೀಮು ನಡೆಸಿದ್ದಾರೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.
ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಧೋನಿ, ರವೀಂದ್ರ ಜಡೇಜಾ, ಕೃನಾಲ್ ಪಾಂಡ್ಯ, ವಿಜಯ್ ಶಂಕರ್, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್, ಮಯಾಂಕ್ ಮಾರ್ಕಂಡೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ