Daily Horoscope
✕

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

Krishnaveni K
ಶುಕ್ರವಾರ, 28 ನವೆಂಬರ್ 2025 (09:31 IST)
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನಂತೂ ಟೀಂ ಇಂಡಿಯಾ ಸೋತು ಸುಣ್ಣವಾಗಿದೆ. ಇದೀಗ ಏಕದಿನ ಸರಣಿ ಆಡಲಿದೆ. ಏಕದಿನ ಸರಣಿ ಯಾವಾಗ, ಎಲ್ಲಿ ಇಲ್ಲಿದೆ ವೇಳಾಪಟ್ಟಿ ವಿವರ.

ಟೆಸ್ಟ್ ಸರಣಿ ಫಲಿತಾಂಶ ಏನೇ ಆಗಿರಲಿ. ಏಕದಿನ ಸರಣಿ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಯಾಕೆಂದರೆ ಏಕದಿನ ಮಾದರಿಗೆ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡುತ್ತಾರೆ. ಈ ದಿಗ್ಗಜರು ಈಗ ಇದೊಂದೇ ಫಾರ್ಮ್ಯಾಟ್ ಆಡುವುದು. ಹೀಗಾಗಿ ಈಗ ಟೀಂ ಇಂಡಿಯಾ ಅಭಿಮಾನಿಗಳು ಏಕದಿನ ಸರಣಿಗಾಗಿ ಎದಿರು ನೋಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಒಟ್ಟು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನವಂಬರ್ 30 ರಿಂದ ಡಿಸೆಂಬರ್ 6 ವರೆಗೆ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ನವಂಬರ್ 30 ರಂದು ರಾಂಚಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ರಾಯಪುರದಲ್ಲಿ ಡಿಸೆಂಬರ್ 3 ರಂದು ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ ಡಿಸೆಂಬರ್ 6 ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗುತ್ತದೆ.

ಭಾರತ ತಂಡ ಇಂತಿದೆ: ಕೆಎಲ್ ರಾಹುಲ್ (ನಾಯಕ), ರೋಹಿತ್ ಶರ್ಮಾ, ಋತುರಾಜ್ ಗಾಯಕ್ ವಾಡ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ ಜ್ಯುರೆಲ್, ವಾಷಿಂಗ್ಟನ್ ಸುಂದರ್, ರಿಷಭ್ ಪಂತ್, ಅರ್ಷ್ ದೀಪ್ ಸಿಂಗ್, ಹರ್ಷಿತ್ ರಾಣ, ಕುಲದೀಪ್ ಯಾದವ್, ಪ್ರಸಿದ್ಧ ಕೃಷ್ಣ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments