IND vs NZ Test: ಟೀಂ ಇಂಡಿಯಾ ಆಟಗಾರರು ನಿನ್ನೆ ಏನು ಮಾಡಿದ್ರು, ಈವತ್ತೂ ಅದೇ ಗತಿಯಾ

Krishnaveni K
ಗುರುವಾರ, 17 ಅಕ್ಟೋಬರ್ 2024 (09:03 IST)
Photo Credit: X
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯದ್ದೇ ಕಾಟವಾಗಿದೆ. ಇದರಿಂದಾಗಿ ಮೊದಲ ದಿನದ ಆಟ ರದ್ದಾಗಿದೆ.

ಈ ಪಂದ್ಯದಲ್ಲಿ ಇದುವರೆಗೆ ಟಾಸ್ ಕೂಡಾ ನಡೆದಿಲ್ಲ. ನಿನ್ನೆಯ ದಿನ ಮೈದಾನ ಸ್ವಿಮ್ಮಿಂಗ್ ಪೂಲ್ ನಂತಿದ್ದ ಕಾರಣ ಸಿಬ್ಬಂದಿಗಳು ಕವರ್ಸ್ ತೆಗೆದೂ ಇರಲಿಲ್ಲ. ಮಳೆಯ ಕಾರಣದಿಂದ ಈ ಟೆಸ್ಟ್ ಪಂದ್ಯ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿಯಿದೆ. ಹೀಗಾಗಿ ಅಭಿಮಾನಿಗಳೂ ಮೈದಾನದತ್ತ ಬರುತ್ತಿಲ್ಲ.

ಈ ನಡುವೆ ಮೊದಲ ದಿನ ಆಟ ನಡೆಯುವುದು ಅನುಮಾನವಾದಾಗ ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮುಂತಾದವರು ನೇರವಾಗಿ ತಮ್ಮ ಕಿಟ್ ತೆಗೆದುಕೊಂಡು ಒಳಾಂಗಣಕ್ಕೆ ತೆರಳಿ ಅಭ್ಯಾಸಕ್ಕಿಳದಿದ್ದರು. ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರೂ ಒಳಾಂಗಣದಲ್ಲಿ ಅಭ್ಯಾಸಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

ಮೈದಾನಕ್ಕೆ ಬಂದಿದ್ದ ಕೆಲವೇ ಕೆಲವು ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರು ಅತ್ತಿತ್ತ ಓಡಾಡುವುದನ್ನೇ ನೋಡಿ ಖುಷಿಪಟ್ಟರು. ಇಂದೂ ಮಳೆಯೇ ಆಗಿದ್ದರೆ ಪಂದ್ಯ ನಡೆಯುವುದು ಅನುಮಾನ. ಹೀಗಾಗಿ ಮತ್ತೆ ಟೀಂ ಇಂಡಿಯಾ ಆಟಗಾರರು ಮೈದಾನ ಬಿಟ್ಟು ಒಳಾಂಗಣದಲ್ಲಿ ಅಭ್ಯಾಸ ನಡೆಸುತ್ತಾ ಕಾಲ ಕಳೆಯಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಜೀವ ಭಯಕ್ಕೆ ಪಾಕಿಸ್ತಾನದಿಂದ ವಾಪಸ್ ಆಗ್ತೀವಿ ಎಂದ ಶ್ರೀಲಂಕಾ ಕ್ರಿಕೆಟಿಗರು: ಬರಬೇಡಿ ಅಂತಿದೆ ಕ್ರಿಕೆಟ್ ಬೋರ್ಡ್

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಮುಂದಿನ ಸುದ್ದಿ
Show comments