Publish Date: Sat, 26 Oct 2024 (16:44 IST)
Updated Date: Sat, 26 Oct 2024 (16:46 IST)
ಪುಣೆ: ಎರಡನೇ ಟೆಸ್ಟ್ ಪಂದ್ಯವನ್ನು 113 ರನ್ ಗಳ ಅಂತರದಲ್ಲಿ ಸೋಲುವುದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿಸಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಸೋಲಿಗೆ ಇವರೇ ಕಾರಣ ಎಂದಿದ್ದಾರೆ.
ಕಳೆದ ಎರಡೂ ಪಂದ್ಯಗಳಲ್ಲಿ ತಂಡದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿದೆ. ಅದರಲ್ಲೂ ಈ ಪಂದ್ಯದಲ್ಲಂತೂ ಅಗ್ರ ಬ್ಯಾಟಿಗರು ಎರಡೂ ಇನಿಂಗ್ಸ್ ಗಳಲ್ಲಿ ಎಡವಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ರೋಹಿತ್ ತಮ್ಮ ತಂಡದ ಸೋಲಿಗೆ ಬ್ಯಾಟಿಗರೇ ಕಾರಣ ಎಂದಿದ್ದಾರೆ.
ಈ ಸೋಲು ನಿಜಕ್ಕೂ ಬೇಸರ ತರುವಂತದ್ದು. ನ್ಯೂಜಿಲೆಂಡ್ ನಮಗಿಂತ ಚೆನ್ನಾಗಿ ಆಡಿತು. ನಾವು ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಹೇಳಬಹುದಷ್ಟೇ. ಅದರಲ್ಲೂ ಬ್ಯಾಟಿಂಗ್ ವಿಭಾಗ ಸಾಕಷ್ಟು ರನ್ ಗಳಿಸುವಲ್ಲಿ ವಿಫಲವಾಗಿದ್ದೇ ಸೋಲಿಗೆ ಕಾರಣವಾಯಿತು ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ವಾಂಖೆಡೆಯಲ್ಲಿ ನಾವು ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಲಿದ್ದೇವೆ. ನಮ್ಮ ಪ್ರದರ್ಶನ ಇದಕ್ಕಿಂತ ಭಿನ್ನವಾಗಿರಲಿದೆ ಎಂದು ರೋಹಿತ್ ಭರವಸೆ ನೀಡಿದ್ದಾರೆ. ಭಾರತೀಯ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದರೆ ಭಾರತ 25 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ.
Krishnaveni K
Publish Date: Sat, 26 Oct 2024 (16:44 IST)
Updated Date: Sat, 26 Oct 2024 (16:46 IST)