Select Your Language

Notifications

webdunia
webdunia
webdunia
webdunia

IND vs ENG test: ಭಾರತಕ್ಕೆ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದ ರೋಹಿತ್ ಶರ್ಮಾ

Rohit Sharma

Krishnaveni K

ರಾಜ್ ಕೋಟ್ , ಗುರುವಾರ, 15 ಫೆಬ್ರವರಿ 2024 (11:42 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್  ಪಂದ್ಯದ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಅಗ್ರ ಮೂವರು ಬ್ಯಾಟಿಗರು ಆರಂಭದಿಂದಲೇ ಆಘಾತ ನೀಡಿದರು. ಕಳೆದ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದ ಯಶಸ್ವಿ ಜೈಸ್ವಾಲ್ 9 ರನ್ ಗಳಿಸಿದರೆ ಮೊನ್ನೆಯಷ್ಟೇ ಫಾರ್ಮ್ ಗೆ ಬಂದಿದ್ದ ಶುಬ್ಮನ್ ಗಿಲ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅದೃಷ್ಟದಿಂದ ಅವಕಾಶ ಪಡೆದಿರುವ ರಜತ್ ಪಟಿದಾರ್ ಮತ್ತೆ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು, 5 ರನ್ ಗೆ ವಿಕೆಟ್ ಒಪ್ಪಿಸಿದರು.

ಒಂದು ಹಂತದಲ್ಲಿ 33 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಆಸರೆಯಾದರು. ರೋಹಿತ್ ಇದೀಗ 74 ಎಸೆತಗಳಿಂದ 52 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರಲ್ಲಿ 8 ಬೌಂಡರಿ ಸೇರಿದೆ. ಕಳೆದ ಎರಡು ಪಂದ್ಯಗಳಲ್ಲಿ ರೋಹಿತ್ ಕಳಪೆ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಆದರೆ ಇಂದು ಅಗತ್ಯದ ಸಂದರ್ಭದಲ್ಲಿ ಜವಾಬ್ಧಾರಿಯುತ ಆಟವಾಡಿ ಗಮನ ಸೆಳೆದರು. ರೋಹಿತ್ ಗೆ ಸಾಥ್ ನೀಡುತ್ತಿರುವ ರವೀಂದ್ರ ಜಡೇಜಾ 24 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜಡೇಜಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದಾರೆ.

ಇಂಗ್ಲೆಂಡ್ ಪರ ಇದುವರೆಗೆ ಮಾರ್ಕ್ ವುಡ್ 2, ಟಾಮ್ ಹಾಟ್ರ್ಲೀ 1 ವಿಕೆಟ್ ಕಬಳಿಸಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಟಾಮ್ ಹಾಟ್ರ್ಲೀ ಅತ್ತುತ್ತಮ ದಾಳಿ ಸಂಘಟಿಸಿದ್ದರು. ಈ ಪಂದ್ಯದಲ್ಲೂ ಅವರ ಫಾರ್ಮ್ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ರೋಹಿತ್ ಶರ್ಮಾನೇ ನಾಯಕ: ಭಾರತಕ್ಕೆ ಕಪ್ ಗ್ಯಾರಂಟಿ!