Select Your Language

Notifications

webdunia
webdunia
webdunia
webdunia

IND vs ENG test: ಟಾಸ್ ಗೆದ್ದ ಟೀಂ ಇಂಡಿಯಾ, ಪ್ಲೇಯಿಂಗ್ ಇಲೆವೆನ್ ಮಾಹಿತಿ

IND vs ENG

Krishnaveni K

ರಾಜ್ ಕೋಟ್ , ಗುರುವಾರ, 15 ಫೆಬ್ರವರಿ 2024 (09:15 IST)
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಈ ಪಂದ್ಯಕ್ಕೆ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಕಮ್ ಬ್ಯಾಕ್ ಮಾಡಿದ್ದಾರೆ. ಜೊತೆಗೆ ಶ್ರೇಯಸ್ ಅಯ್ಯರ್ ಮತ್ತು ಕೆಎಸ್ ಭರತ್ ಸ್ಥಾನದಲ್ಲಿ ಧ್ರುವ ಜ್ಯುರೆಲ್, ಸರ್ಫರಾಜ್ ಖಾನ್ ಗೆ ಚೊಚ್ಚಲ ಅವಕಾಶ ನೀಡಲಾಗಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ಅಕ್ಸರ್ ಪಟೇಲ್, ಮುಕೇಶ್ ಕುಮಾರ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ಟಾಸ್ ಗೆದ್ದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ‘ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ರಾಜ್ ಕೋಟ್ ಉತ್ತಮ ಪಿಚ್ ಗೆ ಹೆಸರುವಾಸಿ. ತಂಡಕ್ಕೆ ಅಗತ್ಯವಿದ್ದಾಗ ಇದುವರೆಗೆ ಎಲ್ಲಾ ಆಟಗಾರರು ಸಾಥ್ ಕೊಟ್ಟಿದ್ದಾರೆ. ಮುಂದಿನ ಮೂರು ಪಂದ್ಯಗಳು ರೋಚಕವಾಗಿರಲಿದೆ. ಅದನ್ನು ನಾವು ಎದಿರು ನೋಡುತ್ತಿದ್ದೇವೆ’ ಎಂದಿದ್ದಾರೆ.

ಇಂಗ್ಲೆಂಡ್ ನಾಯಕ ಬೆನ್ ‍ಸ್ಟೋಕ್ಸ್ ಗೆ ಇದು 100 ನೇ ಟೆಸ್ಟ್ ಪಂದ್ಯ ಎಂಬುದು ವಿಶೇಷ. ಹೀಗಾಗಿ ಅವರು ಈ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡುವ ಉತ್ಸಾಹದಲ್ಲಿದ್ದಾರೆ. ಕಳೆದ ಪಂದ್ಯದ ಬಳಿಕ ಬ್ರೇಕ್ ಸಿಕ್ಕಿದ್ದು ನಮಗೆ ಅನುಕೂಲವಾಗಿದೆ. ನಾವೀಗ ಕುಟುಂಬದ ಜೊತೆ ಕಾಲ ಕಳೆದು ರಿಲ್ಯಾಕ್ಸ್ ಬಂದಿದ್ದೇವೆ ಎಂದಿದ್ದಾರೆ.

ಈ ಪಂದ್ಯಕ್ಕೆ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಹೀಗಿದೆ:
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ರಜತ್ ಪಟಿದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ‍್ರುವ ಜ್ಯುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಇಂಗ್ಲೆಂಡ್: ಜ್ಯಾಕ್ ಕ್ರಾವ್ಲೇ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೇರ್ ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ರೀ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.

Share this Story:

Follow Webdunia kannada

ಮುಂದಿನ ಸುದ್ದಿ

ದುಡ್ಡೇ ತೆಗೆದುಕೊಳ್ಳದೇ ಬ್ಯಾಟ್ ಮೇಲೆ ಸ್ಟಿಕ್ಕರ್ ಹಾಕಿಸಿಕೊಳ್ಳುತ್ತಿದ್ದ ಧೋನಿ!