Publish Date: Tue, 24 Jun 2025 (23:29 IST)
Updated Date: Tue, 24 Jun 2025 (23:38 IST)
ಬೆಂಗಳೂರು: ಹೆಡಿಂಗ್ಲಿಯಲ್ಲಿ ನಡೆಯುತ್ತಿರವ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೊಂಚ ಮುನ್ನಡೆ ಪಡೆದಿದ್ದ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲು ಕಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ 1–0 ಮುನ್ನಡೆಯನ್ನು ಕಾಯ್ದುಕೊಂಡಿದೆ.
ಬೆನ್ ಡೆಕೆಟ್ ಅವರ ಅಮೋಘ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಗೆಲುವಿಗೆ 371ರನ್ ಗುರಿ ಪಡೆದ ಇಂಗ್ಲೆಂಡ್ ತಂಡ, 5 ವಿಕೆಟ್ 373ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 465ರನ್ ಗಳಿಸಿ ಆಲ್ ಔಟ್ ಆಯಿತು. ಇಂಗ್ಲೆಂಡ್ ಇದರಲ್ಲಿ 6 ರನ್‌ಗಳಿಂದ ಸೋಲು ಅನುಭವಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್‌ಗಳ ಮ್ಯಾಜಿಕ್ ಎರಡನೇ ಇನ್ನಿಂಗ್ಸ್‌ನಲ್ಲಿ ವರ್ಕ್ ಆಗಲಿಲ್ಲ. ಇದರಿಂದ ಆಂಗ್ಲರ ನಾಡಲ್ಲಿ ಸೋಲಿನ ರುಚಿಕಂಡಿತು. ಗಿಲ್ ಪಡೆ ಹಲವು ಕ್ಯಾಚ್‌ಗಳನ್ನು ಬಿಟ್ಟಿದ್ದರಿಂದ ಇಂಗ್ಲೆಂಡ್‌ಗೆ ಗೆಲುವಿನ ಹಾದಿ ಮತ್ತಷ್ಟು ಹತ್ತಿರವಾಯಿತು.